‘ಜೆಹಾದ್’ ಲೇಖಕ ಬೊಳುವಾರು ಮಹಮದ್ ಕುಂಞ್ ಅವರ ಪ್ರಸಿದ್ಧ ಕಾದಂಬರಿ. ಧಾರ್ಮಿಕ ಮೂಲಭೂತವಾದಿಗಳ ಬಹುಚರ್ಚಿತ ವಿಷಯ ಜೆಹಾದ್ ಅಂದರೆ ಧರ್ಮಯುದ್ಧ. ಮುಸ್ಲಿಂ ಸಮುದಾಯದ ಹುಡುಗರು ಬೇರೆ ಧರ್ಮದ ಹೆಣ್ಣುಮಕ್ಕಳನ್ನು ಪ್ರೀತಿಸಿದರೆ ಅದು ಜೆಹಾದ್ ಎಂದು ಪರಿಗಣಿಸಿ ಅವರನ್ನು ಹಿಂಸಿಸಲಾಗುತ್ತದೆ. ಕರಾವಳಿಯಲ್ಲಿ ಈ ಪದ ಹೆಚ್ಚು ಬಳಕೆಯಲ್ಲಿದ್ದು ಇದೇ ಕಾರಣಕ್ಕೆ ನಡೆವ ಗಲಭೆಗಳೂ ಹೆಚ್ಚು. ಇಡೀ ಸಮುದಾಯದ ತಲೆಗೆ ಇಲ್ಲದ ಆರೋಪಗಳನ್ನು ಕಟ್ಟಿ ಅವರನ್ನು ದ್ರೋಹಿಗಳಂತೆ ಬಿಂಬಿಸಿ ಕೊಲ್ಲುವ ವ್ಯವಸ್ಥೆಯನ್ನು ಕಾಣುತ್ತಲೇ ಬೆಳೆದ ಬೊಳುವಾರು ಮಹಮದ್ ಕುಂಞ್ ಅವರು ಈ ಕಾದಂಬರಿಯಲ್ಲಿ ಬಹುವಿಧ ದೃಷ್ಟಿಕೋನದಿಂದ ಚರ್ಚಿಸಿ , ತಮ್ಮ ಅನುಭವಗಳ ಸಾಣೆ ಹಿಡಿದು ಈ ಕೃತಿಯನ್ನು ರಚಿಸಿದ್ದಾರೆ. ಪ್ರೀತಿ ಪ್ರೇಮ ಸಂಬಂಧಗಳಿಗೂ ಧರ್ಮಾಂಧರ ಹೊಸ ವ್ಯಾಖ್ಯಾನಗಳು ದ್ವೇಷದ ಹಣೆಪಟ್ಟಿ ಕಟ್ಟಿ ಮತ್ತೆ ದ್ವೇಷವನ್ನಷ್ಟೇ ಬಿತ್ತುಬೆಳೆಯುವ ಸೂಕ್ಷ್ಮ ಎಳೆಗಳನ್ನು ಬಯಲಿಗೆಳೆದಿದ್ದಾರೆ.
ಕನ್ನಡದ ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...
READ MORE