ಕುಂ. ವೀರಭದ್ರಪ್ಪನವರ ರಾಜಕೀಯ ವಿಡಂಬನಾತ್ಮಕ ಕಾದಂಬರಿ. ಚುನಾವಣೆ, ರಾಜಕೀಯ, ಧರ್ಮ ಹೀಗೆ ವರ್ತಮಾನದ ಬದುಕು-ಬದಲಾವಣೆಗಳನ್ನು ಕುಂ.ವೀ. ಅವರು ವ್ಯಂಗ್ಯವಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಅದರ ಒಂದು ಮಾಸಲು ಇಲ್ಲಿದೆ-
“ವಿಶ್ವಸುಂದರಿ ಲಾಸಿಕೆ ಅಂದಾನಿ ಗ್ರೂಪ್ ಆಫ್ ಕಂಪನಿಯ ಗಾರ್ದಭೋತ್ಪಾದನೆಗಳ ರೂಪದರ್ಶಿ ಕಂ ರಾಯಭಾರಿಯಾದರೆ ಈ. ಶ್ರೀಗಾರ್ದಭೇಶ್ವರರು ಜಂಭೂದ್ವೀಪದಂಬ ಕಂಪನಿಯ ಅಂತರಾಷ್ಟ್ರೀಯ ಮಾರುಕಟ್ಟೆಯ ರಾಯಭಾರಿಗಳು. ಲೌಕಿಕ ಜಗತ್ತಿಗೆ ವಿಶ್ವಸುಂದರಿ ಎಷ್ಟು ಮುಖ್ಯವೋ ಆಲೌಕಿಕ ಜಗತ್ತಿಗೆ ಈ ಚತುಷ್ಪಾದಾಳಾವೈನೋದಿಗಳು ಸಹ ಅಷ್ಟೇ ಮುಖ್ಯ. ಈ ಎರಡು ಪರಿಕಲ್ಪನೆಗಳು ಮಾರುಕಟ್ಟೆಯ ಎರಡು ಮುಖಗಳು. ಚುನಾವಣೆ ಹೊಸ್ತಿಲಲ್ಲಿದ್ದಾಗ ಅಂದಾನಿ ಕಂಪನಿಯ ಪ್ರಮಾದ್‌ಗೆ ಹೇಳಿ ಹಾಲಾಹಲ್ ಮೂಲಕ ಈ ಶ್ರೀಗಳನ್ನು ಆಹಿಂಸಾತ್ಮಕ ರೀತಿಯಲ್ಲಿ ಅಪಹರಣವಾಗುವಂತೆ ಸನ್ನಿವೇಶ ಸೃಷ್ಟಿಸಿದರೆ ಹೇಗೆ? ಮತದಾನ ಹೊಸ್ತಿಲಲ್ಲಿರುವ ಸಂದರ್ಭದಲ್ಲಿ ಅದೇ ಪ್ರಮಾದ್‌ನ ಸಹಾಯದಿಂದ ಹಾಲಾಹಲ್‌ನನ್ನು ಬಂಧಿಸಿ, ನಕಲಿ ಎನ್ಕೌಂಟರ್ ನಲ್ಲಿ ಕೊಂದು ಬಂಧನದಿಂದ ಶ್ರೀಗಳನ್ನು ಬಿಡುಗಡೆಗೊಳಿಸಿದರೆ ಹೇಗೇ! ಹೀಗೆ ಮಾಡಿದಲ್ಲಿ ತಾವು ತಮ್ಮ ಪಕ್ಷವೂ ಮತಗಳನ್ನು ಕೊಳ್ಳೆ ಹೊಡೆದು ಜಯಭೇರಿ ಭಾರಿಸುವುದರಲ್ಲಿ ಅನುಮಾನವಿಲ್ಲ, ವಿರೋಧಪಕ್ಷಗಳ ಮೀಸೆ ಮಣ್ಣಾಗುವುದರಲ್ಲಿ ಅನುಮಾನವಿಲ್ಲ.”
ಜಂಭೂದ್ವೀಪ ರಾಷ್ಟ್ರದ ಪ್ರಧಾನಮಂತ್ರಿ ಋಷುಭಧ್ವಜ್ ಉವಾಚ.
ಕುಂ.ವೀ. ಎಂದೇ ಜನಪ್ರಿಯರಾಗಿರುವ ಕಾದಂಬರಿಕಾರ, ಕತೆಗಾರ ಕುಂ. ವೀರಭದ್ರಪ್ಪ ಅವರು ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನವರು. 1953ರ ಅಕ್ಟೋಬರ್ 1ರಂದು ಜನಿಸಿದರು. ‘ಬೇಲಿ ಮತ್ತು ಹೊಲ’ ಕಿರುಕಾದಂಬರಿಯ ಮೂಲಕ ಕನ್ನಡ ಸಾಹಿತ್ಯದ ಶಿಷ್ಟ ಪರಂಪರೆಯ ಬೇಲಿಗಳನ್ನು ಜಿಗಿದ ಕುಂ. ವೀರಭದ್ರಪ್ಪ, ಓದುಗರನ್ನು ಆಕರ್ಷಿಸಿದ್ದು ತಮ್ಮ ವಿಶಿಷ್ಟ ಭಾಷಾ ಪ್ರಯೋಗ ಮತ್ತು ನುಡಿಗಟ್ಟುಗಳಿಂದ. ಅವರ ಕತೆಗಳಲ್ಲಿ ಕಾದಂಬರಿಗಳಲ್ಲಿ ಕಾಣಿಸಿಕೊಂಡ ಭಾಷೆ ಅವರಿಗೆ ಸಾಹಿತ್ಯದಲ್ಲೊಂದು ಪ್ರತ್ಯೇಕ ಸ್ಥಾನ ಕಲ್ಪಿಸಿಕೊಟ್ಟಿತು. ’ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳ ಮೂಲಕ ಸಣ್ಣ ಕತೆಯ ದಿಕ್ಕನ್ನು ಬದಲಾಯಿಸಿದರು. ಶಿವರಾಜ್ ...
READ MORE