‘ಅಪ್ಸರ’ ರಘು ಕನುಗನಹಳ್ಳಿ ಅವರ ಕಾದಂಬರಿಯಾಗಿದೆ. ಕರಾವಳಿಯ ತಟದಲ್ಲಿ ಅರಳಿರುವ ಈ ಕೃತಿ ಜೀವಂತಿಕೆಯ ಪರಮಸಂದೇಶವನ್ನು ತಳೆದು ಎಲ್ಲರ ಜಿಹ್ವೆಯೊಳಗೆ ನಲಿದಾಡಿ ಮನಗಳಿಗೆ ಮುದನೀಡಿದೆ. ವೈವಿಧ್ಯೆಯ ಪಾತ್ರಗಳು ನಲಿದಾಡಿವೆ. ಪಾತ್ರಗಳು ಹೆಚ್ಚಾಗಿದ್ದು, ಕತೆಗೆ ಪೂರಕವಾಗಿದೆ. ಹೆಣ್ಣೊಬ್ಬಳ ದೈವಿಕ ಭಕ್ತಿಯನ್ನು ಕೃತಿಯಲ್ಲಿ ಕಟ್ಟಿಕೊಡುವ ಲೇಖಕರು ಆಧ್ಯಾತ್ಮಕ್ಕೂ ಮಹತ್ವವನ್ನು ನೀಡಿದ್ದಾರೆ. ಕಥಾನಾಯಕಿ ಕೃಷ್ಣನ ಭಕ್ತೆಯಾಗಿದ್ದು, ಆಕೆಯ ಜೀವನದ ವಿಚಾರಗಳನ್ನು ಹಲವು ಮಗ್ಗುಲುಗಳಲ್ಲಿ ಚಿತ್ರಿಸಲಾಗಿದೆ.