ಒಂದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎರಡು ಶುದ್ಧ ವ್ಯಕ್ತಿತ್ವಗಳ ನಡುವಿನ ಪರಿಚಯದಿಂದ ಮೊದಲಾಗುವ ಕಥಾಹಂದರವೇ ’ಅನರ್ಘ್ಯ ರತ್ನ’. ಜೀವನದ ಏಳು ಬೀಳುಗಳಲ್ಲಿ ಒಬ್ಬರಿಗೊಬ್ಬರು ಹೆಗಲಾಗಿ ನಿಲ್ಲುತ್ತಾ, ಪರಿಚಯ ಪ್ರೇಮವಾಗಿ ಬದಲಾಗುವ ನವಿರಾದ ಪ್ರೇಮಕಥೆ ಇಲ್ಲಿದೆ. ಆ ಜೋಡಿಗಳ ಜೀವನದಲ್ಲಿ ಎದುರಾಗುವ ಸಮಸ್ಯೆ, ವಿರಹ, ತೊಳಲಾಟಗಳ ಭಾವ ಮಿಶ್ರಣದೊಂದಿಗೆ ಲೇಖಕಿ ಡಾ. ಶಾಲಿನಿ ಅವರು ಸಮಾಜದ ಕೆಲವು ಪಿಡುಗುಗಳ ಅನಾವರಣಗೊಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕು ವೈಜಕೂರು ಗ್ರಾಮದಲ್ಲಿ ಲೇಖಕಿ ಡಾ. ಶಾಲಿನಿ ವಿ.ಎಲ್. ಅವರು 11 ಏಪ್ರಿಲ್ 1991 ರಲ್ಲಿ ಜನಿಸಿದರು. ಆದರೆ, ಬೆಳೆದಿದ್ದು ಹಾಸನ ಜಿಲ್ಲೆ ಬೇಲೂರು ತಾಲ್ಲೂಕು ಹಳೇಬೀಡಿನಲ್ಲಿ. ಹಾಸನದಲ್ಲಿ ಎಂಬಿಬಿಎಸ್ ಪದವಿ ನಂತರ ಅನ್ನಾಮಲೈ ಯೂನಿವರ್ಸಿಟಿ, ಚಿದಂಬರಂನಿಂದ ಡಿಪಿಎಚ್ ಪದವಿ ಪಡೆದಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯ ಫಲವಾಗಿ ’ಸಹನಾ- ಆದರ್ಶಗಳೊಂದಿಗೆ ಜೀವನ’ ಹಾಗೂ ’ಅನರ್ಘ್ಯ ರತ್ನ’ ಎಂಬ ಕಾದಂಬರಿಗಳನ್ನು ಪ್ರಕಟಿಸಿದ್ದಾರೆ, ಅವರ ಸಾಹಿತ್ಯ ಸೇವೆಗೆ 2019 ನೇ ಸಾಲಿನ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಬೇಲೂರು ತಾಲ್ಲೂಕು ಹಗರೆ ಪ್ರಾಥಮಿಕ ...
READ MORE