ಸುಲಗ್ನ ಸಾವಧಾನ ವಾಣಿ ಅವರು ರಚಿಸಿರುವ ಸಾಮಾಜಿಕ ಕಾದಂಬರಿ. ಇದು ಹೆಣ್ಣು ಮಕ್ಕಳ ಬದುಕಿನ ಕುರಿತು ಹಲವು ಪ್ರಶ್ನೆಗಳನ್ನು ಎತ್ತುವ ಕಾದಂಬರಿ. ಹೆಣ್ಣು ಮಕ್ಕಳು ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಚರ್ಚಿಸಲು ಸಾಧ್ಯವಾಗದೆ ಇದ್ದಂತ ಕಾಲದಲ್ಲಿ, ತಮ್ಮ ಅನುಭವಗಳನ್ನು, ಪರಿಸರದ ಆಗುಹೋಗುಗಳನ್ನು ಸಾಹಿತ್ಯದ ಮೂಲಕ ಹೊರ ಹಾಕುತ್ತಾ 'ವಾಣಿ' ಎಂಬ ಕಾವ್ಯನಾಮದೊಂದಿಗೆ ಇವರ ಸಾಹಿತ್ಯ ಕೃಷಿ ಪ್ರಾರಂಭವಾಯಿತು... ಈ ಪುಸ್ತಕದಲ್ಲಿ ಎರಡು ಕಾದಂಬರಿಗಳಿವೆ..1)- ಸುಲಗ್ನಾ ಸಾವಧಾನ,2)- ಕೊಡುಗೆ.. ಎರಡು ಕಥೆಗಳನ್ನೂ ಶೀರ್ಷಿಕೆಗೆ ಅನ್ವರ್ಥವಾಗುವಂತೆ ಹೆಣೆದಿದ್ದಾರೆ.
ವಾಣಿ- ಕನ್ನಡದ ಪ್ರಮುಖ ಲೇಖಕಿಯರಲ್ಲಿ ಒಬ್ಬರು. ಎಸ್.ಎಸ್.ಎಲ್.ಸಿ. ತನಕ ಶಿಕ್ಷಣ ಪಡೆದಿದ್ದ ಅವರು 1917 ಮೇ 12ರಂದು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಜನಿಸಿದರು. ತಂದೆ ಟಿ. ನರಸಿಂಗರಾಯರು, ತಾಯಿ ಹಿರಿಯಕ್ಕಮ್ಮ. ಬಿಡುಗಡೆ, ಎರಡು ಕನಸು, ಶುಭ ಮಂಗಳ, ಕಾವೇರಿಯ ಮಡಿಲಲ್ಲಿ, ಹೊಸ ಬೆಳಕು, ಅನಿರೀಕ್ಷಿತ, ಪ್ರೇಮ ಸೇತು, ತ್ರಿಶೂಲ, ಸುಲಗ್ನ ಸಾವಧಾನ, ನೆರಳು ಬೆಳಕು, ಚಿನ್ನದ ಪಂಜರ, ಮನೆಮಗಳು, ಅವಳ ಭಾಗ್ಯ, ಅಂಜಲಿ, ಬಾಳೆಯ ನೆರಳು, ಹೂವು ಮುಳ್ಳು, ಬಲೆ, ಅಲೆನೆಲೆ, ಹಾಲು ಒಡೆದಾಗ ಇವರ ಜನಪ್ರಿಯ ಕಾದಂಬರಿಗಳು. ಅವರ ಹಲವು ಕಾದಂಬರಿಗಳು ಚಲನಚಿತ್ರವಾಗಿ ಪ್ರಸಿದ್ದಿಯನ್ನು ಗಳಿಸಿತು. ಕಸ್ತೂರಿ, ನಾಣಿಯ ಮದುವೆ, ಬಾಬು ...
READ MORE