ಕಿಶೋರ ಸಾಹಿತಿ ಅಂತಃಕರಣನ ಕಿರು ಕಾದಂಬರಿ ‘ಹರಳಿಮಠದ ಸಾಹಸಿ ಹುಡುಗರು’. ಕಾದಂಬರಿಯ ಆರಂಭದಲ್ಲಿ ಹರಳಿಮಠ ಎಂಬ ಹಳ್ಳಿಯ ಸಹಜ ವರ್ಣನೆ ಇದೆ. ನಾಲ್ಕನೇ ತರಗತಿಯಿಂದ ತೊಡಗಿ ಎಂಟನೇ ತರಗತಿಯವರೆಗಿನ ಐದು ಮಕ್ಕಳ ಸಾಹಸ ಯಾತ್ರೆ ಈ ಪುಸ್ತಕದಲ್ಲಿದೆ. ಪರಿಸರದ ಕಾಳಜಿಯಿಂದ ತೊಡಗಿ ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗಲು ಆಗಬೇಕಾದ ಬದಲಾವಣೆಗಳೇನು ಎನ್ನುವವರಿಗೆ ತನ್ನ ಸರಳ ಆಪ್ತ ಭಾಷೆಯಲ್ಲಿ ವಿವರಿಸಬಲ್ಲ. ಮಕ್ಕಳ ಮನೋಭೂಮಿಕೆ ಯಾವ್ಯಾವ ಕಲ್ಪನೆಗಳನ್ನು ಕಾಣಬಲ್ಲರು, ನವಿಲುಕಲ್ಲು ಬೆಟ್ಟಕ್ಕೆ ಹೋಗುವ ಹುಡುಗರು ಕರಡಿಯಿಂದ ತಪ್ಪಿಸಿಕೊಳ್ಳುವ, ಕಿಡ್ನ್ಯಾಪ್ ಆದ ಮಕ್ಕಳನ್ನು ಮಕ್ಕಳೇ ರಕ್ಷಿಸುವ, ಬ್ರೇಕ್ ಫೆಲ್ಯೂರ್ ಆದ ಆಟೋದಿಂದ ಹಾರಿ ಬಚಾವಾಗುವ, ಬಸ್ಸಿಗೆ ನುಗ್ಗಿದ ಢಕಾಯಿತರನ್ನು ಮಣಿಸಿ ಪೊಲೀಸರಿಗೊಪ್ಪಿಸುವ, ಮರಗಳ ವಿನಾಶ ತಪ್ಪಿಸುವ ಮಕ್ಕಳ ಸಾಹಸವೇ ಸಾಹಸ. ಇದು ಮಕ್ಕಳ ಮನೋಸಾಮ್ರಾಜ್ಯದಲ್ಲಿ ಒಂದು ಸುತ್ತು ವಿಹರಿಸುವಂತಹ ವಿಭಿನ್ನ ಕೃತಿ.
ಅಂತಃಕರಣ ತನ್ನ 4ನೇ ಕ್ಲಾಸಿನಿಂದ 'ಎಚ್ಚರಿಕೆ', 'ಜೀವನ್ಮುಖಿ' ಪತ್ರಿಕೆಗಳಲ್ಲಿ ಮತ್ತು ಅಂತರ್ಜಾಲ ಪತ್ರಿಕೆ 'ವಿಶ್ವಕನ್ನಡಿಗ'ದಲ್ಲಿ ವಾರಕ್ಕೆ 2 ಅಂಕಣ ಬರೆಯುತ್ತಿರುವ ಅಂಕಣಕಾರ. ಇದುವರೆಗೆ ಕ್ರೀಡಾಂಕಣಗಳೂ ಸೇರಿದಂತೆ 500 ಅಂಕಣಪ್ರಬಂಧ, 95 ಕವಿತೆ, 78 ಕತೆ, 4 ಕಾದಂಬರಿ ಮತ್ತು 1 ನಾಟಕಗಳನ್ನು ರಚಿಸಿರುವ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಬರೆಯುವ ಲೇಖಕ. 9ನೇ ತರಗತಿಯೊಳಗೆ 4 ಸಮಗ್ರ ಬರಹಗಳ ಕೃತಿಗಳು ಸೇರಿದಂತೆ ಒಟ್ಟು 30 ಕೃತಿಗಳನ್ನು ರಚಿಸಿರುವ ಪುಟ್ಟ ಸಾಹಿತಿ. ಪ್ರಸ್ತುತ ಶಿವಮೊಗ್ಗದ ಲೊಯಲಾ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ. ಕನ್ನಡ ಪ್ರವೇಶ, ಕಾವ ಸಾಹಿತ್ಯ ಪರೀಕ್ಷೆಗಳಲ್ಲಿ ಮತ್ತು ...
READ MORE