‘ಪ್ರತೀಕಾರ’ ಮೊಸಾದ್ ಗೂಢಚಾರರ ರೋಚಕ ಕಾರ್ಯಚರಣೆಗಳ ಕುರಿತು ನಿವೃತ್ತ ಪೊಲೀಸ್ ಮಹಾನಿರ್ದೇಶಕರಾದ ಡಿ.ವಿ. ಗುರುಪ್ರಸಾದ್ ಅವರ ಕೃತಿ. ಈ ಕೃತಿಗೆ ಖ್ಯಾತ ಲೇಖಕ ಗುರುರಾಜ ಕರಜಗಿ, ಹಾಗೂ ಲೇಖಕ ಪ್ರೇಮಶೇಖರ ಅವರ ಆಪ್ತ ಬರಹಗಳಿವೆ. ಗುರುಪ್ರಸಾದ್ ರವರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆ, ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ, ಕಲಾತ್ಮಕವಾಗಿ, ಕುತೂಹಲವನ್ನು ಬೆಳೆಸುತ್ತಾ ಹೇಳಬಲ್ಲರು ಎನ್ನುತ್ತಾರೆ ಗುರುರಾಜ ಕರಜಗಿ. ಪ್ರಸ್ತುತ ಗ್ರಂಥ ಪ್ರತೀಕಾರವಂತೂ ಯಾವುದೇ ಪತ್ತೇದಾರಿ ಕಾದಂಬರಿಗಿಂತಾ ಕುತೂಹಲವನ್ನು ಮೂಡಿಸುತ್ತಾ ಹೋಗುತ್ತದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಮೊಸಾದ್ ನ ಸುರಮ್ಯ ಕಥೆಗಳ ಹಿಂದಿನ ಇತಿಹಾಸದ ಬಗ್ಗೆ ಲೇಖಕರು ನೀಡಿರುವ ವಿವರಣೆ ಬಹುಮುಖ್ಯವಾಗುತ್ತದೆ. ಈ ಗ್ರಂಥ ಜನಮಾನಸವನ್ನು ತಟ್ಟುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂಬುದು ಗುರುರಾಜ ಕರಜಗಿ ಅವರ ಮಾತು.
ಲೇಖಕ ಡಿ.ವಿ. ಗುರುಪ್ರಸಾದ್ ಅವರು ನಿವೃತ್ತ ಪೊಲೀಸ್ ಅಧಿಕಾರಿಗಳಾಗಿದ್ದು, ರಾಜ್ಯದ ಪೊಲೀಸ್ ಗುಪ್ತಚರದಳ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಬದುಕಿನ ಅನುಭವ ಮತ್ತು ತಮ್ಮ ವಿಚಾರಗಳನ್ನು ಕೃತಿಗಳ ಮೂಲಕ ದಾಖಲಿಸುವ ಇವರು ಕ್ರೈಂ ಲೋಕದ ವಿಸ್ಮಯ, ವಿಚಿತ್ರ ಸಂಗತಿಗಳನ್ನು ಓದುಗರಮುಂದಿಡುತ್ತಾ ಬಂದಿದ್ದಾರೆ. ‘ಪೊಲೀಸ್ ಜೀವನದಲ್ಲಿ ಹಾಸ್ಯ', 'ವೀರಪ್ಪನ್ : ದಂತಚೋರನ ಬೆನ್ನಟ್ಟಿ', 'ಕೈಗೆ ಬಂದ ತುತ್ತು’, ‘ಪೊಲೀಸ್ ಎನ್ ಕೌಂಟರ್’, 'ಕ್ರೈಂ ಕಥೆಗಳು', 'ನೀವು ಒಮ್ಮೆ ಫೇಲ್ ಆಗಲೇಬೇಕು', 'ಅಪರಾಧಗಳ ಆ ಕ್ಷಣ', 'ವಿಶ್ವಪರ್ಯಟನೆ', 'ರಾಜೀವ್ ಗಾಂಧಿ ಭೀಕರ ಹತ್ಯೆ', 'ವೈವಿಧ್ಯತೆಯಲ್ಲಿ ಸಾಮ್ಯತೆ -ಯುರೋಪಿನ ಹದಿನಾಲ್ಕು ದೇಶಗಳು', 'ಗಲ್ಲುಗಂಬದ ...
READ MOREʻಪ್ರತೀಕಾರʼ ಕೃತಿಯ ಕುರಿತು ಲೇಖಕ ಡಿ ವಿ ಗುರುಪ್ರಸಾದ್ ಅವರ ಮಾತು.