ಕಾದಂಬರಿಕಾರ ಅ.ನ.ಕೃಷ್ಣರಾಯರು ಬರೆದ ಸುದೀರ್ಘವಾದ ಸಾಮಾಜಿಕ ಕಾದಂಬರಿ-ನಟ ಸಾರ್ವಭೌಮ. ಮಾನವ ಸಹಜವಾದ ದೌರ್ಬಲ್ಯಗಳು ಕಲಾವಿದನಲ್ಲೂ ಇರುತ್ತವೆ. ಆದರೆ, ಕಲೆಯನ್ನು ತನ್ನ ಜೀವನದ ರೀತಿಗೆ ಬಳಸಿಕೊಳ್ಳುವ ಕಲಾವಿದನು ಜೀವನದ ಉನ್ನತ ಸ್ಥಾನಕ್ಕೆ ಏರುತ್ತಾನೆ. ಈ ಮಧ್ಯೆ ಬರುವ ಎಲ್ಲ ಅಡ್ಡಿ-ಆತಂಕಗಳನ್ನು ನಿವಾರಿಸಿಕೊಳ್ಳುವ ಪರಿಯನ್ನು ಕಾದಂಬರಿಯಲ್ಲಿ ಚಿತ್ರಿತವಾಗಿದೆ. ಇಲ್ಲಿಯ ಕಥಾನಾಯಕ ರಾಜಾಚಾರ್ಯ. ಓದಿನಲ್ಲಿ ಆಸಕ್ತಿ ಕಳೆದುಕೊಂಡು ವ್ಯಕ್ತಿಗತ ಬದುಕಿನಲ್ಲೂ ಆತ ನೆಲೆ ಕಳೆದುಕೊಳ್ಳುವ ಸ್ಥೀತಿಯಲ್ಲಿರುವಾಗಲೇ ಸ್ನೇಹಿತರ ನೆರವು ಪಡೆಯುಯತ್ತಾನೆ. ಆಗ ಈತನಿಗೆ ಸಿಕ್ಕಿದ್ದೇ ರಂಗಭೂಮಿ. ಕಲಾವಿದನಾಗಿದ್ದ ಈತ ಇಲ್ಲಿ ಉತ್ತಮ ಸಾಧನೆ ಮಾಡಿ ನಟಸಾರ್ವಭೌಮನೆಂದೇ ಖ್ಯಾತಿ ಪಡೆಯುತ್ತಾನೆ. ಕಲಾವಿದನೊಬ್ಬ ತನ್ನ ಕಲೆಯನ್ನು ಜೀವನಕ್ಕಾಗಿ ಬಳಸಿಕೊಂಡ ರೀತಿಯೇ ಕಾದಂಬರಿಯ ವಸ್ತು.
ಈ ಕಾದಂಬರಿಯು ಮೊದಲಬಾರಿಗೆ 1944ರಲ್ಲಿ ಧಾರವಾಡದ ಮನೋಹರ ಗ್ರಂಥಮಾಲೆಯು ಪ್ರಕಟಿಸಿತ್ತು. 153 ಪುಟಗಳನ್ನು (ಬೆಲೆ: 0:18) ಒಳಗೊಂಡಿತ್ತು. .
‘ಅನಕೃ’ ಎಂದೇ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದ ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ ಅವರು ಹೆಸರಾಂತ ಕಾದಂಬರಿಕಾರರು. ‘ಕಾದಂಬರಿ ಸಾರ್ವಭೌಮ’ ಎನಿಸಿಕೊಂಡಿದ್ದ ಅವರು ಕನ್ನಡದ ಜನಪ್ರಿಯ ಕಾದಂಬರಿಕಾರರು. ಪ್ರಗತಿಶೀಲ ಸಾಹಿತ್ಯದ ಪ್ರಮುಖ ಲೇಖಕರು. ತಂದೆ ನರಸಿಂಗರಾವ್, ತಾಯಿ ಅನ್ನಪೂರ್ಣಮ್ಮ. 1908ರ ಮೇ 9ರಂದು ಜನಿಸಿದ ಅವರುಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣವನ್ನು ಕೋಲಾರದಲ್ಲಿ ಮುಗಿಸಿದರು. ಬೆಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ದೇಶೀಯ ವಿದ್ಯಾಶಾಲೆಯಲ್ಲಿ ಪಡೆದರು. ಮೆಟ್ರಿಕ್ ಓದುತ್ತಿದ್ದಾಗ ಶಾಂತಿನಿಕೇತನಕ್ಕೆ ಹೋಗಿ ಬಂದರು. ಬರಹ ಮಾಡಿಯೇ ಬದುಕಿದವರು ಅನಕೃ. ಪತ್ರಿಕಾ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ. ಕಥಾಂಜಲಿ, ಬಾಂಬೆ ಕ್ರಾನಿಕಲ್, ವಿಶ್ವವಾಣಿ ಪತ್ರಿಕೆಗಳನ್ನು ...
READ MORE