ಲಕ್ಷ್ಮಣ ಕೌಂಟೆ ಅವರ ಕಾದಂಬರಿ-ದಂಡಾಧೀಶ. ಕಲಬುರ್ಗಿಯನ್ನು ರಾಜಧಾನಿಯನ್ನಾಗಿಸಿಕೊಂಡು ಆ ಭಾಗವನ್ನು ಆಳಿದ ಬಹಮನಿಯರ ಕಥೆಯನ್ನು ಹೇಳುತ್ತದೆ. ವಿಜಯನಗರದ ಖ್ಯಾತ ದೊರೆ ಇಮ್ಮಡಿ ಪ್ರೌಢದೇವರಾಯ, ಮತ್ತವನ ಮಂತ್ರಿಮಂಡಲದಲ್ಲಿದ್ದ ಸಾತ್ವಿಕ ಬರಹಗಾರ- ಸಚಿವರ ಪರಿಚಯ, ಮುಖ್ಯವಾಗಿ 'ಶಿವತತ್ವ ಚಿಂತಾಮಣಿ'ಯಂತಹ ಮಹತ್ವದ ಕೃತಿಯನ್ನು ಬರೆದ ಲಕ್ಕಣ್ಣ ದಂಡೇಶನ ವೃತ್ತಾಂತಗಳು ತುಸು ವಿಸೃತವಾಗಿ ಗಮನ ಸೆಳೆಯುತ್ತದೆ. ಇಮ್ಮಡಿ ದೇವರಾಯನ ಸರ್ವಧರ್ಮ ಸಮನ್ವಯತೆಯನ್ನು, ಬಹಮನಿಯರ ಮತಾಂಧತೆಯನ್ನು ಹೇಳುವುದು ಇತ್ಯಾದಿ 'ದಂಡಾಧೀಶ' ಕೃತಿಯಲ್ಲಿ ಸಂಕ್ಷಿಪ್ತವಾಗಿ ಕತೆಯಾಗಿ ಕಾಣಬಹುದಾಗಿದೆ.
ಕಾದಂಬರಿಕಾರ ಲಕ್ಷ್ಮಣ ಕೌಂಟೆಯವರು 1958 ಡಿಸೆಂಬರ್ 10 ರಂದು ಜನಿಸಿದರು. ಮೂಲತಃ ಗುಲಬರ್ಗದವರು. ರಂಗಭೂಮಿ ಅವರ ಅಭಿರುಚಿಯ ಕ್ಷೇತ್ರ. ಓದು, ಸಾಹಿತ್ಯ ರಚನೆ, ನಾಟಕ ಅವರ ಒಲವಿನ ಪ್ರವೃತ್ತಿ. ಅವರು ಬರೆದ ನಾಟಕ 'ಕಲೆಯ ಕೊಲೆ ಅರ್ಥಾತ್ ಕಲಾವಿದನ ಕಣ್ಣೀರು' ರಂಗ ಪ್ರದರ್ಶನಗೊಂಡು ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಲೀಲಾತರಂಗ, ಸಂಚಲನ, ಅನುಪರ್ವ, ಸಮರ್ಪಿತ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ...
READ MORE