ಹಿರಿಯ ಸಾಹಿತಿ ಎಚ್.ವಿ. ಸಾವಿತ್ರಮ್ಮ(ಹೆಬ್ಬಳಲು ವೆಲ್ಪನೂರು ಸಾವಿತ್ರಮ್ಮ, 1913-1995) ಅವರ ಎರಡು ಕಾದಂಬರಿಗಳ ಸಂಕಲನ -ಸೀತೆ, ರಾಮ, ರಾವಣ ಮತ್ತು ವಿಮುಕ್ತಿ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಅಂಗವಾಗಿ ಈ ಕೃತಿ ಪ್ರಕಟಿಸಿದೆ. ರಾಮಾಯಣದ ಈ ಮೂರು ಪಾತ್ರಗಳ(ಸೀತೆ, ರಾಮ, ರಾವಣ) ಚಿತ್ರಣದ ಕಾದಂಬರಿಯನ್ನು 1980ರಲ್ಲಿ ಬರೆದಿದ್ದರೆ, ವಿಮುಕ್ತಿ ಕಾದಂಬರಿಯು 1960ರಲ್ಲೇ ಬರೆದಿದ್ದರು. ಅಭಿವ್ಯಕ್ತಿ ಮಾಧ್ಯಮದ ಹೊಸ ಬಗೆಯಾಗಿ ಈ ಕಾದಂಬರಿಗಳು ಓದುಗರನ್ನು ಸೆಳೆದಿದ್ದವು.
ಹಿರಿಯ ಲೇಖಕಿ ಸಾವಿತ್ರಮ್ಮ ರಾಮಸ್ವಾಮಿ ಎಚ್. ವಿ ಅವರು ಕನ್ನಡದ ಮಹತ್ವದ ಬರಹಗಾರ್ತಿಯರಲ್ಲೊಬ್ಬರು. ಚ್. ವಿ. ಸಾವಿತ್ರಮ್ಮನವರು 1913ರ ಮೇ 2ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಹೆಬ್ಬಳಲು ವೆಲಪನೂರು ಸಾವಿತ್ರಮ್ಮ. ತಂದೆ ಎಂ. ರಾಮರಾವ್ ಅವರು ಮತ್ತು ತಾಯಿ ಮೀನಾಕ್ಷಮ್ಮನವರು. ಸಾವಿತ್ರಮ್ಮನವರ ವಿದ್ಯಾಭ್ಯಾಸ ಮಂಡ್ಯ, ಹಾಸನ, ರಾಮನಗರ, ಕೋಲಾರ, ಮೈಸೂರು ಹೀಗೆ ಹಲವೆಡೆಗಳಲ್ಲಿ ನೆರವೇರಿತು. ಪ್ರೌಢಶಾಲೆಯಲ್ಲಿದ್ದಾಗಲೇ ಸಾವಿತ್ರಮ್ಮನವರಿಗೆ ಎಚ್. ಎ. ನಾರಾಯಣರಾಯರೊಂದಿಗೆ ಮದುವೆಯಾಯಿತು. ತಮ್ಮ ಪತಿ ವಿದೇಶಕ್ಕೆ ವ್ಯಾಸಂಗಕ್ಕಾಗಿ ಹೋದದ್ದು ಇವರ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿ ಪರಿಣಮಿಸಿತು. ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡುವುದೇ ಕಷ್ಟ ಎನ್ನುವ ...
READ MORE