ಲೇಖಕಿ ಭವ್ಯಶ್ರೀ ಬಿ ಹರ್ಷ ಅವರ ಕೃತಿ ‘ಋಣಾನುಬಂಧ’ ಮುನ್ನಡಿ ಬರೆದ ಬಿ.ವಿ ವಸಂತಕುಮಾರ್, ’ಕೃತಿ ಸರಾಗವಾಗಿ ಓದಿಸಿಕೊಳ್ಳುತ್ತದೆ. ಹೆಣ್ಣುಮಕ್ಕಳ ಬಾಳಿನ ಭಾವನೆಗಳ ತಳಮಳಗಳು ಮತ್ತು ಮನಸ್ಸಿನ ಸಂಕೀರ್ಣತೆಯನ್ನು ಈ ಕೃತಿಯ ಪಾತ್ರಗಳಲ್ಲಿ ಸೊಗಸಾಗಿ ತಂದಿದ್ದಾರೆ . ಕೃತಿಯ ಆರಂಭವೇ ಅಂಥದ್ದೊದು ಸಂಭ್ರಮ ಮತ್ತು ದುರಂತಗಳ ಐಕ್ಯತೆಯಲ್ಲಿ ಸಂಭವಿಸುತ್ತದೆ.’ ಎಂದಿದ್ದಾರೆ.
ಲೇಖಕಿ ಭವ್ಯಶ್ರೀ ಬಿ ಹರ್ಷ ಅವರು ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನವರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ.ಏನ್ ಹೊಸಕೋಟೆ ಹಾಗೂ ಅರಸೀಕೆರೆಗಳಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಅರಸೀಕೆರೆಯ ಸರ್ಕಾರಿ ಪದವಿ ಪೂರ್ವ ಕಾಲೇನಲ್ಲಿ ಪೂರ್ಣಗೊಳಿಸಿದರು. ತಿಪಟೂರಿನ ಕಲ್ಪತರು ಅಡವಪ್ಪ ಆರ್ಟ್ಸ್ & ಕಾಮರ್ಸ್ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಹಾಗೂ ಕನ್ನಡ ವಿ.ವಿ ಯ ದೂರಶಿಕ್ಷಣ ಕೇಂದ್ರದಿಂದ ಎಂ.ಕಾಂ ಪದವಿ ಪಡೆದರು. ಪ್ರಸ್ತುತ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರು. ’ಋಣಾನುಬಂಧ ’ ಕಾದಂಬರಿ ಇವರ ಮೊದಲ ಕೃತಿ. ...
READ MORE