‘ಆಳ’ ಅನುಪಮಾ ನಿರಂಜನ ಅವರ ಸಾಮಾಜಿಕ ಕಾದಂಬರಿಯಾಗಿದೆ. ಪ್ರಗತಿಶೀಲರ ಪ್ರಗತಿಪರ ಧೋರಣೆ ಮತ್ತು ಬಂಡಾಯ ಮನೋಭಾವ ಹಾಗೂ ನವ್ಯರ ಆತ್ಮಶೋಧನೆ ಮತ್ತು ಕಲಾತ್ಮಕತೆ, ಈ ಎರಡು ಗುಣಗಳು ಕೂಡ ಅನುಪಮಾ ಅವರ ಕಾದಂಬರಿಯಲ್ಲಿವೆ. ಪ್ರಗತಿಶೀಲ ನವ್ಯ, ನವ್ಯೋತ್ತರಕ್ಕೆ ಪರಿಚಯವಿಲ್ಲದ ವೈದ್ಯಕೀಯ ಕ್ಷೇತ್ರದ ಅನುಭವಗಳು, ಮನೋವೈಜ್ಞಾನಿಕ ವಿಶ್ಲೇಷಣೆಗಳು, ಈ ಲೇಖಕಿಯ ಕೃತಿಯಲ್ಲಿ ವಿಜೃಂಭಿಸುತ್ತದೆ. ಇವರ ಕಾದಂಬರಿಯಲ್ಲಿ ಕಾಣುವಂತಹ ವಸ್ತುನಿಷ್ಠತೆ, ಮನೋವೈಜ್ಞಾನಿಕ ವಿಶ್ಲೇಷಣೆ, ವೈಚಾರಿಕತೆ, ಬಂಡಾಯ ಪ್ರವೃತ್ತಿ, ಮಾನವೀಯ ಸಂಬಂಧಗಳ ನಿರೂಪಣೆ ಇವೆಲ್ಲಾ ಇವರ ಕಾದಂಬರಿಯ ಕ್ಷೇತ್ರಕ್ಕೆ ಹೊಸ ಮಜಲುಗಳನ್ನು ನೀಡಿದೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
READ MORE