‘ದರಗುಟ್ಟಿ ಮಳೆ ಸುರಿದು’ ಮಮತಾಪ್ರಭು ಅವರ ಕಾದಂಬರಿಯಾಗಿದೆ. ರೈತರ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡದಲ್ಲಿ ರಚನೆಯಾದ ಸಾಹಿತ್ಯ ಕೃತಿಗಳು ಬಹಳ ಅಪರೂಪ ಎಂದೇ ಹೇಳಬೇಕು ಸ್ವಾತಂತ್ರ್ಯ ಪೂರ್ವದಲ್ಲಿ ಕುವೆಂಪು ಅವರು ಬರೆದ ನೀಳ್ಗತೆ 'ಧನ್ವಂತರಿ ಚಿಕಿತ್ಸೆ' ಯಲ್ಲಿ ವ್ಯವಸ್ಥೆಯ ಭಾರದಿಂದ ಅಪ್ಪಚ್ಚಿಯಾಗಿ ಚೀರುತ್ತಿರುವ ರೈತರನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ.
ಮಮತಾಪ್ರಭು ಮೂಲತಃ ಹಳೇಬೀಡಿನವರು. ತಂದೆ ಪರಮೇಶ್ವರಪ್ಪ ತಾಯಿ ಶಾರದಮ್ಮ .ವೃತ್ತಿಯಲ್ಲಿ ಶಿಕ್ಷಕಿ ಪ್ರವೃತ್ತಿಯಲ್ಲಿ ಲೇಖಕಿಯಾಗಿದ್ದಾರೆ. ಪ್ರಸ್ತುತ್ತ ಕರ್ನಾಟಕ ಪಬ್ಲಿಕ್ ಶಾಲೆ ಹಳೇಬೀಡು ಅಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಕೃತಿಗಳು: ಭಾವದೊಲದ ಬೆಳೆಗಳು (ಲೇಖನ ಸಂಕಲನ), ದರಗುಟ್ಟಿ ಮಳೆ ಸುರಿದು (ಕಾದಂಬರಿ) ...
READ MORE