ಲೇಖಕ ಅನುಷ್ ಎ ಶೆಟ್ಟಿಯವರ ಕಾದಂಬರಿ ’ನೀನು ನಿನ್ನೊಳಗೆ ಖೈದಿ’ ದೇಜಾವು ಅಥವಾ ಮರುಸ್ಮೃತಿಯ ಕುರಿತು ವಿಜ್ಞಾನಿಯೊಬ್ಬ ನಡೆಸುವ ಸಂಶೋಧನೆಯ ಸುತ್ತ ಈ ಕಾದಂಬರಿ ಚಲಿಸುತ್ತದೆ. ಮತ್ತು ಕಾಲಾಘಾಟಿ ಜೈಲಿನಿಂದ ಮಾಯವಾದ ಖೈದಿಯೊಬ್ಬನಿಗೆ ಹೆಣೆದುಕೊಳ್ಳುವ ಘಟನಾವಳಿಗಳ ಸುತ್ತ ಈ ಕಾದಂಬರಿಯನ್ನು ಹೆಣೆಯಲಾಗಿದೆ.
ಅನುಷ್ ಎ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಕೂಡಿ ಆರಂಭಿಸಿರುವ ‘ನಾವು’ ಬ್ಯಾಂಡ್ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಪ್ರಸ್ತುತ, ಗೆಳೆಯ ಶ್ರೀವತ್ಸ ಅವರೊಂದಿಗೆ ‘ಇವೆಂಟೊ’ ಎಂಬ ಇವೆಂಟ್ ಕಂಪೆನಿ ಮತ್ತು ಅನುಗ್ರಹ ...
READ MOREಲೇಖಕರ ನುಡಿ