‘ಕೆರೂರುನಾಮಾ’ ಚಂದ್ರಕಾಂತ ಕುಸನೂರ ಅವರ ಕಾದಂಬರಿಯಾಗಿದೆ. ಹಳ್ಳಿಯ ಸಾಮಾನ್ಯ ವ್ಯಕ್ತಿಗಳ ವಿಶಿಷ್ಟ ಸ್ವಭಾವಗಳನ್ನು ಕಾದಂಬರಿ ಸ್ವಾರಸ್ಯವಾಗಿ ಕಟ್ಟಿಕೊಡುತ್ತದೆ. ತುಳಸಕ್ಕನಂಥ ವಿಧವೆಯ ಧೈರ್ಯದ ಸ್ವಭಾವವನ್ನು ಚಿತ್ರಿಸುವ ಸಂದರ್ಭದಲ್ಲಿಯೇ ಲೇಖಕರು ಅರ್ಥಹೀನ ಸಾಂಪ್ರದಾಯಿಕ ನಡವಳಿಕೆಗಳನ್ನು ವಿಡಂಬನೆಗೆ ಗುರಿಪಡಿಸುತ್ತಾರೆ. ಲೇಖಕರ ಆಶಯದಂತೆ ಕಾದಂಬರಿಯ ಓದು 'ಪ್ರಬುದ್ಧ ಮನರಂಜನೆ'ಯನ್ನು ಓದುಗರಿಗೆ ಕೊಡುತ್ತದೆ.
ಕನ್ನಡದ ಖ್ಯಾತ ಸಾಹಿತಿ, ರಂಗಕರ್ಮಿ ಚಂದ್ರಕಾಂತ ಕುಸನೂರು ಮೂಲತಃ ಕಲಬುರಗಿಯ ಕುಸನೂರಿನವರು. (ಜನನ: 1931ರ ಅಕ್ಟೋಬರ್ 21) ಎಂ.ಎ, ಬಿ.ಇಡಿ ಪದವೀಧರರು. ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಬುರ್ಗಿಯಲ್ಲಿ ರಂಗ ಮಾಧ್ಯಮ ಎಂಬ ನಾಟಕ ಸಂಸ್ಥೆಯನ್ನು ಸ್ಥಾಪಿಸಿ, ಕನ್ನಡದಲ್ಲಿ ವಿಭಿನ್ನ ಮಾದರಿಯ ನಾಟಕಗಳನ್ನು ರಚಿಸಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ್ದು, ಆನಿ ಬಂತಾನಿ, ರಿಹರ್ಸಲ್, ರತ್ತೋ ರತ್ತೋ ರಾಯನ ಮಗಳೇ, ದಿಂಡಿ, ವಿದೂಷಕ, ಹಳ್ಳಾ ಕೊಳ್ಳಾ ನೀರು ನಾಟಕಗಳನ್ನು ರಚಿಸಿದ್ದಾರೆ, ಜೊತೆಗೆ, ನಂದಿಕೋಲು ಎನ್ನುವ ಕಾವ್ಯ ಸಂಕಲನ, ಮಾಲತಿ ಮತ್ತು ನಾನು, ಯಾತನಾ ಶಿಬಿರ, ಗೋಹರಜಾನ್, ...
READ MOREಹೊಸತು- ಅಕ್ಟೋಬರ್-2005
ಬಾಬರ್‌ನಾಮಾ, ಅಕ್ಟರ್‌ನಾಮಾಗಳನ್ನು ನೆನಪಿಗೆ ತರುವ ಕೆರೂರುನಾಮಾ ಚಂದ್ರಕಾಂತ ಕುಸನೂರ ಅವರ ಕಾದಂಬರಿ. ಹಳ್ಳಿಯ ಸಾಮಾನ್ಯ ವ್ಯಕ್ತಿಗಳ ವಿಶಿಷ್ಟ ಸ್ವಭಾವಗಳನ್ನು ಕಾದಂಬರಿ ಸ್ವಾರಸ್ಯವಾಗಿ ಕಟ್ಟಿಕೊಡುತ್ತದೆ. ತುಳಸಕ್ಕನಂಥ ವಿಧವೆಯ ಧೈರ್ಯದ ಸ್ವಭಾವವನ್ನು ಚಿತ್ರಿಸುವ ಸಂದರ್ಭದಲ್ಲಿಯೇ ಲೇಖಕರು ಅರ್ಥಹೀನ ಸಾಂಪ್ರದಾಯಿಕ ನಡವಳಿಕೆ ಗಳನ್ನು ವಿಡಂಬನೆಗೆ ಗುರಿಪಡಿಸುತ್ತಾರೆ. ಲೇಖಕರ ಆಶಯದಂತೆ ಕಾದಂಬರಿಯ ಓದು 'ಪ್ರಬುದ್ಧ ಮನರಂಜನೆ' ಯನ್ನು ಓದುಗರಿಗೆ ಕೊಡುತ್ತದೆ. ಆದರೆ ಕೆಲವು ಕಡೆ ಅತಿ ವಾಸ್ತವತೆಯ ವರ್ಣನೆಗಳು, ರಂಜಕ ಶೈಲಿ ಲೇಖಕರ ವಿಚಾರಗಳನ್ನು ದಾರಿತಪ್ಪಿಸು ವುದುಂಟು. ಆದರೂ ಹಲವಾರು ವಿಶಿಷ್ಟ ಪಾತ್ರಗಳ ಮೂಲಕ ಉತ್ತರ ಕರ್ನಾಟಕದ ಬದುಕಿನ ಸಹಜ ಚಿತ್ರಣವನ್ನು ಕೊಡುವಲ್ಲಿ ಕಾದಂಬರಿ ಯಶಸ್ಸನ್ನು ಪಡೆದಿದೆ.