ಗಳಗನಾಥರು ಬರೆದ ಕಾದಂಬರಿ-ತಿಲೋತ್ತಮೆ. ಪ್ರೇಮದ ವಿವಿಧ ಪರಿಗಳನ್ನು ಇಲ್ಲಿಂದ ತಿಳಿಯಬಹುದು. ತಿಲೋತ್ತಮೆ-ಜಗತ್ಸಿಂಗನ ಪ್ರೇಮ ಆದರ್ಶಮಯ ಹಾಗೂ ಸರಸ ಪ್ರೇಮಕ್ಕೆ ಸಾಕ್ಷಿ. ಆಯೇಷಳ ಪ್ರೇಮವು ಎಷ್ಟೇ ಬಲವತ್ತರವಾಗಿದ್ದರೂ ಜಗತ್ಸಿಂಗನ ಪ್ರೇಮದೊಂದಿಗೆ ಸರಿಯಾಗಿ ಜೋಡಾಗುವುದಿಲ್ಲ. ಆಯೇಷಾಳದು ಒಂಟಿ ಪ್ರೇಮವಾಗಿ ನಿರಸ ಪ್ರೇಮ ಎಂದೇ ಕರೆಯಬೇಕು. ಆಯೇಷಳ ಮೇಲಿದ್ದ ಉಸ್ಮಾನನ ಪ್ರೇಮವೂ ನಿರಸವೇ! ಏಕೆಂದರೆ, ಇವರ ಪ್ರೇಮದಿಂದ ಯಾರಿಗೂ ಸುಖವಾಗಲಾರದು. ಆದರೆ, ಈ ಇಬ್ಬರಲ್ಲಿಯ ಪ್ರೇಮವು ನಿಷ್ಕಾಮವಾದದ್ದೇ ಸರಿ. ಇದು ಕರ್ತವ್ಯವನ್ನು ನೆನಪಿಸುತ್ತದೆ.
ಆಯೇಷಳು ತೀರಿ ಹೋದ ಕೆಲ ದಿನಗಳ ನಂತರ ಉಸ್ಮಾನನು ತೀರಿ ಹೋಗುತ್ತಾನೆ. ಅವರಿಬ್ಬರ ಸಮಾಧಿಯೂ ಒಂದೇ ಕಡೆ ಇರುವುದು ಪ್ರೇಮದಲ್ಲಿ ಅವರು ನಿರ್ವಹಿಸಿದ ಕರ್ತವ್ಯಪ್ರಜ್ಞೆ ಪಾತ್ರವು ಸದಾ ಮನನೀಯ.ಇದು ಕಾದಂಬರಿಯ ವಸ್ತು.
ವಿಪುಲವಾದ ಕನ್ನಡ ಬರೆವಣಿಗೆಯಿಂದ ಇಡೀ ನಾಡಿನಲ್ಲಿ ಭಾಷಾ ಜಾಗೃತಿಯನ್ನುಂಟುಮಾಡಿದ ಪ್ರಸಿದ್ಧ ಲೇಖಕರಲ್ಲೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ. ’ಗಳಗನಾಥ’ ಅವರ ಕಾವ್ಯನಾಮ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಹಾವೇರಿ ತಾಲ್ಲೂಕಿನ ಗಳಗನಾಥ ಎಂಬ ಹಳ್ಳಿ. ಗಳಗನಾಥರ ಮೊದಲ ಕಾದಂಬರಿ ’ಪದ್ಮನಯನೆಗೆ ಬಹುಮಾನ’. 1898ರಿಂದ 1942ರವರೆಗೆ ಅವ್ಯಾಹತ ಬರವಣಿಗೆಯಲ್ಲಿ ತೊಡಗಿಕೊಂಡವರು. ’ಕಮಲಕುಮಾರಿ, ಮೃಣಾಲಿನಿ, ವೈಭವ, ಕನ್ನಡಿಗರ ಕರ್ಮಕಥೆ’ ಮುಂತಾದ ಕಾದಂಬರಿಗಳ ರಚಿಸಿದ್ಧಾರೆ. ’ಗಿರಿಜಾ ಕಲ್ಯಾಣ, ಉತ್ತರರಾಮ ಚರಿತ್ರೆ, ಚಿದಂಬರ ಚರಿತ್ರೆ ಮುಂತಾದ ಪೌರಾಣಿಕ ಕಥೆಗಳು, ಸತ್ಪುರುಷರ ಚರಿತ್ರೆಗಳು, ನಿಬಂಧ-ಪ್ರಬಂಧಗಳ ರಚನೆ, ಪ್ರಕಟಣೆ. 1907ರಲ್ಲಿ ಸದ್ಬೋಧ ಚಂದ್ರಿಕಾ ಮಾಸಪತ್ರಿಕೆ ಪ್ರಾರಂಭಿಸಿದರು.. ‘ಮಾಧವ ಕರುಣಾವಿಲಾಸ’ ...
READ MORE