ಮಠ

Author : ಇಂದುಮತಿ ಲಮಾಣಿ

Pages 238

₹ 301.00




Year of Publication: 2023
Published by: ವಾಗ್ಝಾಯಿ ಪ್ರಕಾಶನ
Address: MIG 2 'ಸೋಮಿ', #118, ಆದರ್ಶ ನಗರ, ವಿಜಯಪುರ-586103
Phone: 9880271693

Synopsys

`ಮಠ..!!’ ಇಂದುಮತಿ ಲಮಾಣಿ ಅವರ ಪತ್ತೇದಾರಿ ಕಾದಂಬರಿಯಾಗಿದೆ. ಕೃತಿಯ ಕುರಿತು ಬಾಳಾಸಾಹೇಬ ಲೋಕಾಪುರ ಹೀಗೆ ಹೇಳಿದ್ದಾರೆ; ನವೋದಯ ಮತ್ತು ಪ್ರಗತಿಶೀಲ ಸಾಹಿತ್ಯ ರಚನಾ ಕಾಲದಲ್ಲಿ ಕೇವಲ ಮುಲ್ಕಿ ಪರೀಕ್ಷೆ ಪಾಸ ಮಾಡಿದವೇ ಹೆಚ್ಚಾಗಿದ್ದುದು ನಮಗೆಲ್ಲ ತಿಳಿದ ವಿಷಯವೇ ಒಂದು ಕಾಲ್ಪನಿಕ ಮಠದಲ್ಲಿ ನಡೆಯುವ ದುರಂತ, ಅಲ್ಲಿ ಗೌಪ್ಯವಾಗಿ ನಡೆಯುವ ಅನಾಚಾರಗಳು, ತನ್ನ ಹೆಸರಿನ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಮಠ ಮಾಡುವ ಹುನ್ನಾರಗಳು ಈ ಕಾದಂಬರಿಯ ವಸ್ತು ವಿಷಯವಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯದ ಸರ್ವಾಧ್ಯಕ್ಷರನ್ನು ಅಯುವಲ್ಲಿ ನಡೆಯುವ ಆತಂಕ ಮತ್ತು ಯೋಗ್ಯರನ್ನು ಕಡೆಗಣಿಸಿ ತಮಗೆ ಬೇಕಾದ ಸಾಹಿತಿ (ಹಣಕೊಟ್ಟವನನ್ನು) ಆಯ್ಕೆ ಮಾಡುವ ವ್ಯವಸ್ಥೆಯನ್ನು ಈ ಕಾದಂಬರಿ ನಾಟಕೀಯವಾಗಿ ಹೇಳುತ್ತದೆ. 'ಕೇದಿಗೆ ಮಠ' ಎಂಬ ಕಾಲ್ಪನಿಕ ಮಠದ ಉತ್ತರಾಧಿಕರಿಯಾದ ಆನಂದಶ್ರೀಗಳ ಅವಾಂತರ ಹಾಗು ಮಠದ ಹೆಸರು ಮತ್ತು ಶ್ರೀಗಳನ್ನು ಒಂದು ದುರ್ಭರ ಪರಿಸ್ಥಿತಿಯಲ್ಲಿ ಕಾಪಾಡಿಕೊಳ್ಳಲು ಮಠದ ವ್ಯವಸ್ಥೆ ಏನೆಲ್ಲಾ ಆಟ ಆಡುತ್ತದೆ ಮತ್ತು ಶೋಧಕಾರ್ಯವು ಹಣದ ಕಡೆಗೆ ಹೇಗೆ ವಾಲಿಕೊಂಡು ಅಪರಾಧಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುತ್ತದೆ ಎನ್ನುವ ಕಥಾವಸ್ತುವನ್ನು ಕಾದಂಬರಿಯು ಹೊಂದಿದೆ.

About the Author

ಇಂದುಮತಿ ಲಮಾಣಿ

ಈಗಾಗಲೇ ಹದಿನೈದಿಪ್ಪತ್ತು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವ ಹಿರಿಯ ಲೇಖಕಿ ಇಂದುಮತಿ ಲಮಾಣಿಯವರು ಹುಟ್ಟಿದ್ದು ವಿಜಯಪುರ ಜಿಲ್ಲೆಯ ಬರಟಗಿಯ ಮೂರನೇ ತಾಂಡದಲ್ಲಿ (1959). ಕೊರಡು ಕೊನರುವುದು ಬರಡು ಹಯನಹುದು, ದಲನ ಎಂಬ ಮಹತ್ವದ ಕಾದಂಬರಿಗಳನ್ನು, ನನ್ನ ಸುತ್ತಿನ ಸತ್ಯಗಳು, ತಾಯಿ ಲೋಕ,  ಬಾನ ಚಂದಿರ, ಕಾವ್ಯ ಸಂಕಲನ, ಗೋರ್, ಬಂಜಾರ ಸ್ತ್ರೀಯರ ವಸ್ತ್ರಾಭರಣ ಸಮುಜಾಯದ ಸಾಂಸ್ಕೃತಿಕ ಕೃತಿಗಳು. ಬಂಜಾರಾ ಭೀಷ್ಮ ಎಲ್.ಆರ್.ನಾಯ್ಕ್ ಜೀವನ ಚರಿತ್ರೆ. ಎಟುಝಡ್(ಹಾಸ್ಯ ನಾಟಕ). ಕಬ್ಬಡಿ ಲಲಿತಾ ಪ್ರಬಂಧ. ಶ್ಯಮಂತಕ ಮಣಿ. ಹೀಗೆ ಅನೇಕ ವೈವಿಧ್ಯಮಯ ಕೃತಿಗಳಿಂದ ಬೆರಗು ಮೂಡಿಸಿದ್ದಾರೆ. ...

READ MORE

Related Books