ರಾಷ್ಟ್ರಕವಿ ಕುವೆಂಪು ಅವರು ಬೃಹತ್ ಕಾದಂಬರಿ ’ಕಾನೂರು ಸುಬ್ಬಮ್ಮ ಹೆಗ್ಗಡಿತಿ’ ಕನ್ನಡ ಸಾಹಿತ್ಯದ ಪ್ರಮುಖ ಕಾದಂಬರಿಗಳಲ್ಲಿ ಒಂದು. ಇದು ಕವಿ ಕುವೆಂಪು ಅವರ ಮೊದಲ ಕಾದಂಬರಿ.1936ರಲ್ಲಿ ಪ್ರಕಟವಾದ ಈ ಬೃಹತ್ ಕಾದಂಬರಿಯ ಶಿಲ್ಪ, ಭಾಷಾ ಬಳಕೆ ಮತ್ತು ಒಟ್ಟು ಜೀವನದರ್ಶನದ ದೃಷ್ಟಿಯಿಂದಲೂ ಕನ್ನಡ ಕಾದಂಬರಿ ಲೋಕಕ್ಕೆ ದೊರೆತ ಅನನ್ಯ ಕಾಣಿಕೆ ಎಂದು ಗುರುತಿಸಲಾಗುತ್ತದೆ. ವಿಮರ್ಶಕರ ಭಾಷೆಯಲ್ಲಿ ಹೇಳುವುದಾದರೆ ಇದು ಕನ್ನಡ ಸಾಹಿತ್ಯದ ನಿರ್ಮಾಣಶೀಲ ಯುಗದ ಪ್ರಮುಖ ಪ್ರತಿನಿಧಿ. ಅಷ್ಟೇ ಅಲ್ಲ, ಇದೊಂದು ಪದ್ಯ ಕಾವ್ಯ. ಮುನ್ನುಡಿಯಲ್ಲಿ ಕುವೆಂಪು ಅವರು ’ಕಾದಂಬರಿ ಕರತಲ ರಂಗಭೂಮಿ: ಅಂಗೈಮೇಲಣ ನಾಟಕಶಾಲೆ. ಆದ್ದರಿಂದ ಕಾದಂಬರಿಯನ್ನು ಓದುವ ವಾಚಕರು ನಾಟಕವನ್ನು ನೋಡುವ ಪ್ರೇಕ್ಷಕರೂ ಆಗಬೇಕಾಗುತ್ತದೆ’ ಎಂದು ಹೇಳಿದ್ದಾರೆ. ಈ ಕಾದಂಬರಿ ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ಸ್ವಾತಂತ್ರ್ಯ ಚಳುವಳಿ, ಗಾಂಧಿಪ್ರಭಾವ, ಮದ್ಯಪಾನ ವಿರೋಧಿ ಚಳುವಳಿ ಮೊದಲಾದವುಗಳು, ಮಲೆನಾಡಿನ ಬದುಕು, ಕೃಷಿ-ಕಾಡು, ಸಂಸ್ಕೃತಿ ಎಲ್ಲವೂ ಅನಾವರಣಗೊಳ್ಳುತ್ತವೆ. ನವೋದಯ ಕಾಲಘಟ್ಟದ ಪ್ರಮುಖ ಕವಿಯಾಗಿದ್ದ ಕುವೆಂಪು ಅವರಿಗೆ ಗದ್ಯ ಅಭಿವ್ಯಕ್ತಿ ಹೊಸತೇನೂ ಆಗಿರಲಿಲ್ಲ. ನಾಟಕ, ಪ್ರಬಂಧ ಹಾಗೂ ಕಥೆಗಳಲ್ಲಿ ಅದು ಕಾಣಿಸಿಕೊಂಡಿತ್ತು. ಅವರು ತಮ್ಮ ಮಹಾಕಾವ್ಯಕ್ಕೆ ತಮ್ಮದೇ ಆದ ಛಂದಸ್ಸನ್ನು ಶೋಧಿಸಿಕೊಂಡಂತೆ ಕಾದಂಬರಿಗೆ ತಮ್ಮದೇ ಆದ ಮಾರ್ಗವೊಂದನ್ನು ಕುವೆಂಪು ಅವರು ಶೋಧಿಸಿಕೊಂಡಿದ್ದಾರೆ. ನಿರ್ದಿಷ್ಟ ಕೇಂದ್ರದೊಂದಿಗೆ ಸದಾ ಸಂವಾದಿಸುವ ಬಗೆಯ ಕಾದಂಬರಿ ಶಿಲ್ಪಕ್ಕಿಂತ ಭಿನ್ನವಾದ ಒಂದು ಮಾದರಿಯನ್ನು ಅವರು ಅಳವಡಿಸಿಕೊಂಡರು. ಭಾರತೀಯ ಮಹಾಕಾವ್ಯಗಳ ಅಭಿವ್ಯಕ್ತಿ ಮಾದರಿಯಲ್ಲಿ ಬಳಕೆಯಾಗಿರುವ ತಂತ್ರ ಅದು.
ಕುವೆಂಪು ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡಿದ ಕವಿ, ಪ್ರಖರ ವಿಚಾರವಾದಿ-ಚಿಂತಕ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡ ಸಾಹಿತ್ಯದ ಮೇರೆಗಳನ್ನು ವಿಸ್ತರಿಸಿದವರು. ತಂದೆ ವೆಂಕಟಪ್ಪಗೌಡ ತಾಯಿ ಸೀತಮ್ಮ. ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯವರಾದ ಪುಟ್ಟಪ್ಪ ಜನಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಹಿರೇಕೂಡಿಗೆಯಲ್ಲಿ 1904ರ ಡಿಸೆಂಬರ್ 29ರಂದು. ಮನೆಯಲ್ಲೇ ಖಾಸಗಿ ಮೇಷ್ಟರ ಮೂಲಕ ಪ್ರಾರಂಭಿಕ ವಿದ್ಯಾಭ್ಯಾಸದ ನಂತರ ತೀರ್ಥಹಳ್ಳಿಯಲ್ಲಿ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೆಸ್ಲಿಯನ್ ಮಿಷನ್ ಹೈಸ್ಕೂಲ್, ಮಹಾರಾಜ ಕಾಲೇಜುಗಳಲ್ಲಿ ಓದಿ ಎಂ.ಎ. ಪದವಿ (1929) ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಅಧ್ಯಾಪಕ (1929) ಆಗಿ ಅನಂತರ ಕ್ರಮೇಣ ಉಪಪ್ರಾಧ್ಯಾಪಕ, ...
READ MOREಕಾನೂರು ಹೆಗ್ಗಡತಿ