`ಸಂಭವ’ ಕೃತಿಯು ಸುರೇಶ ಪಾಟೀಲ ಅವರ ಕಾದಂಬರಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬದುಕು ಮತ್ತು ಸಾಮಾಜಿಕ ಸ್ಥಿತ್ಯಂತರಗಳ ವಾಸ್ತವವನ್ನು ಭೂತ- ಭವಿಷತ್ತು; ಭ್ರಮೆ ಕನಸು; ಆಕಸ್ಮಿಕ- ಪೂರ್ವ ನಿರ್ಧಾರಿತಗಳ ದ್ವಂದ್ವಾತ್ಮಕ ನೆಲೆಯಿಂದ ವಿಭಿನ್ನ ಪಾತ್ರ ಲೋಕಗ್ರಹಿಕೆಗಳ ಮೂಲಕ ದಾಖಲಿಸುವ 'ಸಂಭವ'ವು ಸಾಧ್ಯತೆಗಳ ಪ್ರಪಂಚವನ್ನು ಆಶ್ಚರ್ಯಕರ ಅಷ್ಟೇ ಸ್ವಾರಸ್ಯ ಪೂರ್ಣವಾಗಿ ಹಿಡಿದಿಡುತ್ತದೆ. 'ಕಾದಂಬರಿ' ಪ್ರಕಾರದ ಪರಿಕಲ್ಪನೆಯು ಕಾಲಕ್ರಮದಲ್ಲಿ ಮತ್ತೆ ಮತ್ತೆ ಪುನರ್ ರೂಪೀಕರಣಕ್ಕೆ ಒಳಗಾಗುತ್ತ ಹೊಸ ಸಾಧ್ಯತೆಗಳನ್ನು ಪ್ರಕಟಿಸಬೇಕಾದ ಅನಿವಾರ್ಯತೆಯ ಈ ಸಂದರ್ಭದಲ್ಲಿ 'ಸಂಭವ' ಒಂದು ವಿಶಿಷ್ಟ ಪ್ರಯೋಗ ಎನ್ನಬಹುದು' ಎಂದಿದೆ.
ಸುರೇಶ ಪಾಟೀಲ ಅವರು ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು : ಸಂಭವ (ಕಾದಂಬರಿ) ...
READ MORE