‘ವೈಶಾಖ’ ಚದುರಂಗ ಅವರ ಕಾದಂಬರಿ. ‘ದರುಮನಳ್ಳಿ’ ಈ ಕಾದಂಬರಿಯ ಕೇಂದ್ರ ಬಿಂದುವಾಗಿದ್ದು ಅಂದಿನ ಜಾತಿಕಲಹ, ಪಂಚಾಯ್ತಿ ರಾಜಕೀಯ, ಸಂಪ್ರದಾಯದ ಕುರಿತು ಗ್ರಾಮೀಣ ಸೊಗಡಿನಲ್ಲಿ ಓದಿಸಿಕೊಂಡು ಹೋಗುತ್ತದೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಮತ್ತು ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿರುವುದು ಈ ಕೃತಿಯ ‘ಶ್ರೇಷ್ಠತೆ-ಒಳದನಿ’ಗೆ ಸಾಕ್ಷಿ.
ಸಣ್ಣ ಕಥೆಗಾರ, ಕಾದಂಬರಿಕಾರ, ನಾಟಕಕಾರ ಆದ ಚದುರಂಗರು (ಎಂ. ಸುಬ್ರಹ್ಮಣ್ಯರಾಜೇ ಅರಸ್ ಅವರು) ಕನ್ನಡದ ಮಹತ್ವದ ಲೇಖಕರಲ್ಲಿ ಒಬ್ಬರು. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ 1916ರ ಜನವರಿ 1ರಂದು ಜನಿಸಿದರು. ತಂದೆ ಮುದ್ದುರಾಜೇ ಅರಸ್ ಮತ್ತು ತಾಯಿ ಮರುದೇವಿ ಅರಸ್. ರಾಜಮನೆತನದ ಒಡನಾಟವಿದ್ದ ಇವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಮೈಸೂರಿನ ರಾಯಲ್ ಸ್ಕೂಲ್, ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜು, ಮೈಸೂರು ಮಹಾರಾಜ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಬಿ.ಎ. ಪದವಿ ಪಡೆದರು. ಕಾನೂನು ಮತ್ತು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಪುಣೆಗೆ ಹೋದರು. ಕಾರಣಾಂತರಗಳಿಂದ ಶಿಕ್ಷಣ ಪೂರ್ಣಗೊಳ್ಳಲಿಲ್ಲ. ಗಾಂಧಿ ...
READ MORE