ಉಷಾ ನವರತ್ನರಾಂ ಅವರ ಸಾಮಾಜಿಕ ಕಾದಂಬರಿ ಕಿಚ್ಚು. ಈ ಕಾದಂಬರಿಯ ಸಣ್ಣ ತುಣುಕು “ನೋಡೀ ತಾಯಿ, ಭಗವಂತ ಸತ್ಯ, ಧರ್ಮಗಳ ಸಂಕೇತ. ಆ ಭಗವಂತನಿಂದಾಗಿ ಬೆಟ್ಟದಂತೆ ಬಂದಿದ್ದ ಕಷ್ಟ ಮೋಡದಂತೆ ಕರಗಿ ಹೋಗಿದೆ. ಮನೆಗೆ ನಿಶ್ಚಿಂತೆಯಿಂದ ಹೋಗಿ. ಯಾವಾಗಲೂ ಆ ಭಗವಂತನನ್ನೇ ನಂಬಿ. ನಂಬಿದವರ ಕೈ ಎಂದೂ ಬಿಡುವುದಿಲ್ಲ.” ಸುಬ್ರಮಣ್ಯ ಶಾಸ್ತ್ರಿಗಳು ನಮ್ಮತನ ತಲೆ ಸವರಿದರು. `ಬೇಗ ಗುಣ ಆಗುತ್ತೆ ಮಗು. ನೀನು ಏನು ಅನುಭವಿಸುತ್ತಿದ್ದೀ ನನಗೆ ಗೊತ್ತು. ನಿನ್ನಂತರಾಳದ ಕಿಚ್ಚು ಖಂಡಿತ ಶಮನವಾಗುತ್ತದೆ! ನಾನೂ ನಿನ್ನ ಕಷ್ಟ ಪರಿಹರಿಸಲು ಯತ್ನಿಸುತ್ತೇನೆ! ಮಗು-ನಿಶ್ಚಿಂತೆಯಿಂದಿರು.” ಹೇಮಂತ ಸಾಹಿತ್ಯ ಪ್ರಕಾಶನವು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದೆ.
ಲೇಖಕಿ ಉಷಾ ನವರತ್ನರಾಂ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ- ಎಂ.ವಿ. ಸುಬ್ಬರಾವ್. ತಾಯಿ- ಶಾಂತಾ. ಪ್ರಾರಂಭಿಕ ಶಿಕ್ಷಣವನ್ನು ಶಿವಮೊಗ್ಗದ ಮೇರಿ ಇಮ್ಯಾಕುಲೇಟ್ ಕಾನ್ವೆಂಟ್ ಹಾಗೂ ಬೆಂಗಳೂರಿನ ಮಹಿಳಾ ಸೇವಾ ಸಮಾಜದಲ್ಲಿ ಪೂರ್ಣಗೊಳಿಸಿದರು. ಆನಂತರ ಮೌಂಟ್ ಕಾರ್ಮಲ್ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯ ಹಾಗೂ ಇತಿಹಾಸದಲ್ಲಿ ಪದವಿ ಪಡೆದರು. ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಪೂರೈಸಿದರು. ವಿದ್ಯಾರ್ಥಿನಿಯಾಗಿದ್ದಾಗಲೇ ಹಲವು ಲೇಖನಗಳನ್ನು ಪ್ರಕಟಿಸಿದರು. ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಅಂಕಣಗಾರ್ತಿಯಾಗಿದ್ದು, ಗೆಳತಿ ಮತ್ತು ಉಷಾ ಪತ್ರಿಕೆಗಳ ಸಂಪಾದಕಿಯಾಗಿದ್ದರು. ಮಹಿಳಾ ಸೇವಾ ಸಮಾಜದಲ್ಲಿ ಅಧ್ಯಾಪಕಿಯಾಗಿ 27 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ವರ್ಷ ರೀಜನಲ್ ಫಿಲಂ ಸೆನ್ಸಾರ್ ...
READ MORE