ಕಾದಂಬರಿಕಾರ ವಿಠಲ್ ಶೆಣೈ ಅವರ ಕಾದಂಬರಿ ನೂರಕ್ಕೆ ನೂರು. ಮುನ್ನುಡಿಯ ಜಾಗದಲ್ಲಿ ಬಂದ "ನನ್ನುಡಿ" ಯಲ್ಲಿ ವಿಠಲ್ ಶೆಣೈ ಅವರು ಬರೆದ ಪ್ರಕಾರ, ಯುಟ್ಯೂಬ್ ನಲ್ಲಿ ನೋಡಿದ ಒಂದು ವೀಡಿಯೊ, ಅವರಿಗೆ ಹೊಸದೊಂದು ಮಾಹಿತಿಯನ್ನು ಕಾದಂಬರಿಯ ರೂಪದಲ್ಲಿ ಬರೆಯಲು ಪ್ರೇರೇಪಿಸಿತು! ಕಥೆಯನ್ನು ಬೆಳೆಸಲು ಅಗತ್ಯವಾಗಿದ್ದ ಸನ್ನಿವೇಶ, ಸಂದರ್ಭಗಳನ್ನು ಹಾಗೂ ಪಾತ್ರಗಳನ್ನು ಬಹಳ ಆಸಕ್ತಿಯಿಂದ ಆಯ್ದುಕೊಂಡು ಬರೆದಿದ್ದಾರೆ. ಆ ಹೊಸ ವಿಷಯವೇನು? ಅದೇ "ಹೈಪರ್ ಥೈಮೀಸಿಯ" ಇದು ಒಂದು ಅಪರೂಪದ ರೋಗ. ಇದು ರೋಗಿಗೆ ವರವೂ ಆಗಬಲ್ಲದು, ಶಾಪವೂ. ಈ ರೋಗವಿರುವವರಿಗೆ ತಮ್ಮ ರೋಗದ ಬಗ್ಗೆ ತಿಳಿದಿರುವುದಿಲ್ಲ. ಆದರೆ ಅಚ್ಚಳಿಯದ ನೆನಪಿನ ಶಕ್ತಿ ಇರುತ್ತದೆ. ಯಾವುದೇ ಘಟನೆಯ ಕುರಿತು ಯೋಚಿಸಿದರೆ ಸಾಕು, ಮನಸ್ಸಿನ ಪರದೆಯ ಮೇಲೆ ಅದರ ರಿ-ಪ್ಲೇ(replay) ಆಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕಾದಂಬರಿಯನ್ನು ಓದಲೇಬೇಕು. ಅಲ್ಲದೆ ಪ್ರೇಮ, ಪ್ರಣಯ, ರಾಜಕಾರಣ, ದೌರ್ಜನ್ಯ, ಹಿಂಸೆ ಇತ್ಯಾದಿ ಇಲ್ಲದ ಕಾದಂಬರಿ ಓದುಗರನ್ನು ಆಕರ್ಷಿಸದು ಎಂಬ ಕುರುಡು ನಂಬಿಕೆಯನ್ನು ಸುಲಭವಾಗಿ ಸೋಲಿಸುತ್ತದೆ.
ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ವಿಠ್ಠಲ್ ಶೆಣೈ ಅವರು ಮೂಲತಃ ಮಂಗಳೂರಿನವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು, ತಾವು ಓದಿದ ಪುಸ್ತಕಗಳ ಬಗ್ಗೆ ತಮ್ಮ ಬ್ಲಾಗ್‌ಗಳಲ್ಲಿ ಬರೆಯುವ ಹವ್ಯಾಸ ಉಳ್ಳವರು. ಕೃತಿಗಳು: ಪಾರಿವಾಳಗಳು (ಲಲಿತ ಪ್ರಬಂಧಗಳು) ಹಾಗೂ ತಾಳಿಕೋಟೆಯ ಕದನದಲ್ಲಿ (ಕಾದಂಬರಿ) , ಹುಲಿ ವೇಷ (ಕತೆಗಳ ಸಂಕಲನ) ಹಾಗೂ ನಿಗೂಢ ನಾಣ್ಯ (ಕಾದಂಬರಿ) ...
READ MORE