ಹೊಳೆಯ ಹಾದಿ

Author : ಭಾಗೀರಥಿ ಹೆಗಡೆ

Pages 144

₹ 70.00




Year of Publication: 2008
Published by: ಆನಂದಕಂದ ಗ್ರಂಥಮಾಲೆ
Address: ಬಲರಾಮ ಟೀಚರ್ಸ್ ಕಾಲೋನಿ, ಮಲ್ಲಾಡಿಹಳ್ಳಿ, 577531
Phone: 8191268950

Synopsys

“ಹೊಳೆಯ ಹಾದಿ” ಸ್ತ್ರೀ ಪ್ರಜ್ಞೆಯನ್ನು ವಿಸ್ತರಿಸುವ ಭಾಗೀರಥಿಯವರ ಪ್ರಮುಖ ಕಾದಂಬರಿಯಾಗಿದೆ. ’ಹೊಳೆಯ ಹಾದಿ’ ಭಾಗೀರಥಿಯವರ ಮೊದಲ ಕಾದಂಬರಿಯು ’ಸಕಾಲಿಕ’ ಎಂಬ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟಣಗೊಂಡಿತ್ತು. ಧಾರಾವಾಹಿಯಾಗಿ ಪ್ರಕವಾದ ಈ ಕಾದಂಬರಿ ಓದುಗರ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಹಳ್ಳಿಯ  ಜಂಜಾಟಗಳ ಬದುಕಿನ ಹೊಲದಲ್ಲಿ ಗಾಣದೆತ್ತಿನಂತೆ ದುಡಿವ ಮಹಿಳೆಯೊಬ್ಬಳ ಕಥೆ. ಇಡೀ ಕುಟುಂಬಕ್ಕೆ ತಾಯಿಯಾಗಿ ತನ್ನ ಜೀವನವನ್ನೇ ಮುಡಿಪಾಗಿಡುವ ಕಥಾನಾಯಕಿ, ಹೆಣ್ಣಿನ ಮನಸ್ಸಿನಲ್ಲಿ ನಡೆಯುವ ಭಾವನೆಗಳ ಹೋರಾಟದಲ್ಲಿ ಹೇಗೆ ಸೆಣೆಸಾಡುತ್ತಾಳೆ, ಅವಳ ವಾಸ್ತವ ಬದುಕಿನ ತಲ್ಲಣಗಳೇನು ಎಂಬುದನ್ನು ಇಲ್ಲಿ ಲೇಖಕಿ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. 

About the Author

ಭಾಗೀರಥಿ ಹೆಗಡೆ
(23 July 1948)

ಲೇಖಕಿ ಭಾಗೀರಥಿ ಹೆಗಡೆ ಅವರು ಜನಿಸಿದ್ದು, 1948 ಜುಲೈ 23ರಂದು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ತಟ್ಟಿಕೈ ಗ್ರಾಮದವರು. ತಾಯಿ ಗಣಪಿ ಭಟ್ಟ. ತಂದೆ ವೆಂಕಟ್ರಮಣ ಭಟ್ಟ. ಹುಟ್ಟೂರು ಹಾಗೂ ಸಿದ್ದಾಪುರದಲ್ಲಿ ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದಿದ್ದಾರೆ. ಶಾಲಾ ದಿನಗಳಿಂದಲೇ ಸಾಹಿತ್ಯದಲ್ಲಿ ಆಸಕ್ತಿಯಿದ್ದ ಭಾಗೀರಥಿ ಅವರು ಹಲವಾರು ಕಥೆ, ಕವನಗಳನ್ನು ಬರೆದಿದ್ದಾರೆ. ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳಲ್ಲಿ ಇವರು ಬರೆದ ಲೇಖನಗಳು ಪ್ರಕಟವಾಗಿವೆ. ಭಾಗೀರಥಿ ಅವರ ಪ್ರಮುಖ ಕೃತಿಗಳೆಂದರೆ ಸ್ವೀಕಾರ, ಅರ್ಥ, ಪ್ರವಾಹ, ಗಿಳಿಪದ್ಮ, ಬೇಟೆ, ಪ್ರತಿಮೆ, ಆಳ, ಹಿಮನದಿ (ಕಥಾ ಸಂಕಲನ), ಚಂದ್ರಗಾವಿ, ಒಂದು ದಿನ (ಕವನ ...

READ MORE

Related Books