ಈ ಪರಿಯ ಸೊಬಗು-ಇದು ಲೇಖಕಿ ಸಾಯಿಸುತೆ ಅವರ ಸಾಮಾಜಿಕ ಕಾದಂಬರಿ. ಜೀವನ ಬಹುಮುಖಿ. ಅದು ಪಾಠಗಳನ್ನು ಕಲಿಸುತ್ತಾ ಹೋಗುತ್ತದೆ. ರಾಜಕೀಯ, ಸಿರಿವಂತಿಕೆ, ಸ್ಥಾನಮಾನ, ಅಧಿಕಾರ, ಯೌವನವು ಶಾಶ್ವತವಲ್ಲ. ಇದು ನಿಜ! ಸಂಪೂರ್ಣ ಸತ್ಯ! ಆದರೆ ಅದರ ಅರಿವು ಆಗುವುದು ಎಷ್ಟು ಮಂದಿಗೆ? ಅಂಥ ಹಲವಾರು ಮಂದಿ ಕಾದಂಬರಿಯ ಉದ್ದಕ್ಕೂ ಬರುತ್ತಾರೆ. ಇವರೆಲ್ಲ ನೀವುಗಳು ಕಾಣದವರಲ್ಲ, ಎಲ್ಲಿಂದಲೋ ಹೆಕ್ಕಿ ತೆಗೆದ ಸಂದರ್ಭಗಳು, ಸನ್ನಿವೇಶಗಳು ಅಲ್ಲ! ಇವರೆಲ್ಲ ನಮ್ಮವರೇ, ನಮ್ಮ ಒಳಗಿನವರೇ ಆಗಿರುತ್ತಾರೆ. ಮಹಾಭಾರತ, ರಾಮಾಯಣ ನನ್ನ ಇಷ್ಟದ ಗ್ರಂಥಗಳು. ತುಂಬ ತುಂಬ ಇಷ್ಟವಾಗುವ ಪಾತ್ರ ಭಗವಾನ್ ಶ್ರೀಕೃಷ್ಣನದು. ಭಗವದ್ಗೀತೆಯ ಮೂಲಕ ಕಲಿಯುಗಕ್ಕೆ ಬೋಧಕನಾಗಿದ್ದಾನೆ. ಶರಣಾಗತಿಯನ್ನು ಬೋಧಿಸಲಿಲ್ಲ. ಅಧರ್ಮವನ್ನು ಸದೆಬಡೆಯಲು ಉತ್ಸಾಹ ತುಂಬಿದ. ಅದಕ್ಕೆ ಬೇರೆ ಬೇರೆ ರೂಪ ಅಷ್ಟೆ.’ ಎಂದು ಸಾಯಿಸುತೆ ಅವರು ಕೃತಿಗೆ ಬರೆದ ಮುನ್ನುಡಿಯಲ್ಲಿ ಹೇಳಿದ್ದಾರೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE