‘ಅಮ್ಮ ನನ್ನಮ್ಮ’ ಸುನಂದ ಸಿದ್ದಪ್ಪ ಮುಳೆ ಅವರ ಕಾದಂಬರಿಯಾಗಿದೆ. ತಾಯಿಯ ಮಹತಿಯ ಜತೆಗೆ ಆಯಾ ಕಾಲದ, ಆಯಾ ಪ್ರದೇಶದ, ಆಯಾ ಸಂಪ್ರದಾಯಗಳ ಪಾರಿವಾರಿಕ -ಸಾಮಾಜಿಕ ಚಿತ್ರಣವನ್ನು ನೀಡುವುದರಿಂದ ಇದೊಂದು ಸಂಸ್ಕೃತಿ ಅಧ್ಯಯನ ಕೃತಿಯಾಗಿಯೂ ಹೊರಹೊಮ್ಮಿದೆ. ಅಷ್ಟೇಅಲ್ಲದೆ ಅಮ್ಮನ ಮನೆಯಲ್ಲಿ ಕಳೆದ ಬಾಲ್ಯದ ದಿನಗಳನ್ನು ಮೆಲುಕು ಹಾಕುತ್ತಲೇ ಪ್ರಾರಂಭವಾಗುವ ಇಲ್ಲಿನ ಬರವಣಿಗೆಯು ಮದುವೆಯಾಗುವ ವಯಸ್ಸಿನವರೆಗೂ ದಿನಾಲೂ ಅಮ್ಮನಿಂದಲೇ ಜೋಡು ಜಡೆಯನ್ನು ಹಾಕಿಸಿಕೊಂಡ ರಸಘಳಿಗೆಯನ್ನು ಬಿಚ್ಚಿಡುತ್ತಾರೆ. ಮದುವೆ ನಿಶ್ಚಿತವಾದ ಮೇಲೆ “ಪುಟ್ಟಿ, ಇನ್ನು ಮುಂದೆ ನೀನು ಯಾರಿಂದ ತಲೆ ಬಾಚಿಸಿಕೊಳ್ಳುತ್ತೀಯಾ...?" ತಬ್ಬಿಕೊಂಡು ತಲೆ ನೇವರಿಸುತ್ತಾ ಕೇಳಿದಳು. ಇಂತಹ ವಾತ್ಸಲ್ಯಪೂರಿತ ಅಮ್ಮನ ಮಾತುಗಳನ್ನು ಇಂದಿಗೂ ನೆನಪಿಸಿಕೊಳ್ಳುವ ಲೇಖಕಿ ಧಾರೆ ಎರೆದು ಕೊಡುವಾಗ, ಹೆಣ್ಣು ಒಪ್ಪಿಸುವಾಗ, ಗಂಡನ ಮನೆಗೆ ಕಳಿಸುವಾಗ ಬಿಕ್ಕಿ ಬಿಕ್ಕಿ ಅತ್ತ ತಾಯಿ ಅವಳ ಆಳದ ಒಲವು ಇತ್ತೀಚೆಗೆ ಅರ್ಥವಾಗುತ್ತಿದೆ. ಗಂಡನ ಮನೆಗೆ ಬಂದು ಎಲ್ಲರೊಂದಿಗೆ ಬೆರೆಯುತ್ತಾ ಅಮ್ಮನ ನೆನಪಿನಲ್ಲಿಯೇ ಹೊಸ ಜೀವನವನ್ನು ಪ್ರಾರಂಭಿಸಿದ ರೀತಿಯನ್ನು ಸೊಗಸಾಗಿ ಚಿತ್ರಿಸಿದ್ದಾರೆ.
ಬರಹಗಾರ್ತಿ ಸುನಂದ ಸಿದ್ದಪ್ಪ ಮುಳೆ ಅವರು 1950 ಜೂನ್ 27 ರಂದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಜನಿಸಿದರು. ಹಿಂದಿ ವಿಶಾರದ ಪದವೀಧರೆ. ’ಸುರಗಿ-ಸುಗ್ಗಿ, ಹನಿಹನಿಗಬ್ಬ’ ಪ್ರಮುಖ ಕೃತಿಗಳು. “ಜಿಲ್ಲಾ ಸಾಹಿತ್ಯ ಪ್ರತಿಷ್ಠಾನ-ಬೆಳಗಾವಿಯಿಂದ ಕವಿ ಎಸ್.ಡಿ. ಇಂಚಲ ಕಾವ್ಯ ಪ್ರತಿಷ್ಠಾನ ಪ್ರಶಸ್ತಿ, ಅಖಿಲ ಭಾರತ ಕವಯತ್ರಿ ಸಮ್ಮೇಳನದ ರಾಷ್ಟ್ರೀಯ ಪ್ರಶಸ್ತಿ , AIPC ವಿಶೇಷ ಸಮ್ಮಾನ ಪ್ರಶಸ್ತಿ, ಈಜಿಪ್ಟ್ (ಕೈರೊ) ಮತ್ತು ಟರ್ಕಿ ದೇಶ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 'ದಿ ಡಾಟರ್ ಆಫ್ ನೈಲ್' ಪ್ರಶಸ್ತಿ, ರಶಿಯಾ-ತಾಪ್ಟೆಂಟ್ ಮತ್ತು ಸಮ್ಮರಖಂಡಗಳ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ’ದಿ ವುಮನ್ ಆಫ್ ...
READ MORE