ಲೇಖಕ ಅಂಬ್ರಯ್ಯ ಮಠ ಅವರ ಪೌರಾಣಿಕ ಕಾದಂಬರಿ -ವೇದವ್ಯಾಸ. ಹಿಂದೂ ಧರ್ಮ ಹಾಗೂ ಪರಂಪರೆಯಲ್ಲಿ ವೇದವ್ಯಾಸರ ಹೆಸರು ಪ್ರಮುಖ. ಇವರನ್ನು ಬ್ರಹ್ಮರ್ಷಿ ಎಂದೂ ಕರೆಯಲಾಗುತ್ತಿದೆ. ಬ್ರಹ್ಮನನ್ನು ಸಂಪೂರ್ಣವಾಗಿ ತಿಳಿದವರು. ವ್ಯಾಸರು ಮಹಾಭಾರತವನ್ನು ರಚಿಸಿದವರು. ಇವರ ಬಣ್ಣ ಕಪ್ಪು ಇರುವುದರಿಂದ ಕೃಷ್ಣ ಎಂದೂ ದ್ವೀಪದಲ್ಲಿ ಜನಿಸಿದ್ದರಿಂದ ದ್ವೈಪಾಯನ ಎಂದೂ, ಒಟ್ಟಿಗೆ ಇವರನ್ನು ‘ಕೃಷ್ಣ-ದ್ವೈಪಾಯನ’ ಎಂದೂ ಕರೆಯಲಾಗುತ್ತದೆ. ಪುರಾಣಗಳಲ್ಲಿ ಇವರು ವಿಷ್ಣುವಿನ ಅವತಾರ ಎಂದೇ ಪ್ರಸಿದ್ಧಿ. ಇವರು ಏಳು ಚಿರಂಜೀವಿಗಳಲ್ಲಿ ಒಬ್ಬರು. ಇವರ ವೃತ್ತಾಂತವನ್ನು ಪುರಾಣಗಳಲ್ಲಿ ವಿವರಿಸಿದಂತೆ ಲೇಖಕರು ಕಾದಂಬರಿಯಾಗಿಸಿದ್ದು ವಿಶೇಷ.
ಹಿರಿಯ ಲೇಖಕ ಅಂಬ್ರಯ್ಯ ಮಠ ಅವರು ನಿವೃತ್ತ ಕರ್ನಾಟಕ ಪವರ್ ಕಾರ್ಪೋರೇಷನ್ ( ಕೆಪಿಸಿ) ವ್ಯವಸ್ಥಾಪಕರು. ಶಿವಮೊಗ್ಗದ ಬಿದನೂರು ವಾಸಿ. ಜೂನ್ 1,1953ರಂದು ಜನಿಸಿದರು. ಅಂಕಣ ಸಂಕಲನ: ನಿಂತ ನೀರ ಕಲಕಬೇಡಿ, ಪರಮ ನೀಚನ ಹೆಜ್ಜೆ ಗುರುತು, ಬೆಳ್ಳಿ ಬೆಳಕಿಂಡಿ. ಪ್ರವಾಸಕಥನ: ಯೇಸು ನಡೆದಾಡಿದ ನಾಡಲ್ಲಿ. ಕಾದಂಬರಿ: ಬಿದನೂರು ರಾಣಿ ವೀರಮ್ಮಾಜಿ, ಅಹಲ್ಯೆ ಅಂತರಂಗ, ಅಂಬೆ, ಕೆಳಾದಿಕುಲತಿಲಕ ವೆಂಕಟಪ್ಪ ನಾಯಕ. ಒಕ್ಕೈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇಲ್ಲಿನ ಜಿ. ಆರ್. ರೇಬವಯ್ಯ ದತ್ತಿ ಪ್ರಶಸ್ತಿ ದೊರೆತಿದೆ. ಒಂದೊಮ್ಮೆ ಜಾರಿದಾಗ ಸಣ್ಣಕಥೆಯು ಇಂಗ್ಲೀಷ್ ಮತ್ತು ಹಿಂದಿ ಭಾಷೆಗೆ ಭಾಷಾಂತರಗೊಂಡಿದೆ. ಕೃತಿಗಳು: ಕೆಳದಿಯ ...
READ MORE