’ನಧೀ ಧೀಂ ತಾ’ ಕಾದಂಬರಿಯ ನಾಯಕಿ ಕಾವ್ಯ ಮಗುವಾಗಿರುವಾಗಲೇ ತಾಯಿ ಸುಕನ್ಯ ಕ್ಯಾನ್ಸರ್ ಪೀಡಿತಳಾಗುತ್ತಾಳೆ. ತಾನು ಸಾಯುವುದು ಖಚಿತವಾದ ನಂತರ, ಮಗುವಿನ ಭವ್ಯ ಭವಿಷ್ಯಕ್ಕೊಂದು ಉಪಾಯ ಹೂಡುವ ಅವಳು ಅದರಲ್ಲಿ ಯಶಸ್ವಿಯಾಗಿ ಕೊನೆಗೆ ಅಸುನೀಗುತ್ತಾಳೆ. ದೊಡ್ಡಮ್ಮನ ಮಡಿಲನ್ನು ಹೊಕ್ಕ ಕಾವ್ಯ ನೃತ್ಯ ಸಂಗೀತದ ಮೊರೆ ಹೋಗುತ್ತಾಳೆ. ಸಂಗೀತ ಹಾಗೂ ನೃತ್ಯ ಸೇವೆಗೆ ತನ್ನನ್ನು ಮುಡುಪಾಗಿಸಿಕೊಂಡ ಕಾವ್ಯ ನೃತ್ಯ ಸಂಗೀತದ ಮೊರೆ ಹೋಗುತ್ತಾಳೆ ಹಾಗು ವಿವಾಹವಾಗಲು ಒಪ್ಪಿಕೊಳ್ಳುವುದಿಲ್ಲ. ಅವಳ ಗುರು ಗುರುಗೋವಿಂದಾಚಾರ್ಯರು ಒಪ್ಪಿಸಿದ ಮೇಲೆ ಅನಿವಾರ್ಯವಾಗಿ ಅದೂ ಕೂಡ ಮುಂದೆಯೂ ನೃತ್ಯವನ್ನು ಮುಂದುವರೆಸುವ ಒಪ್ಪಿಗೆ ಪಡೆದ ಮೇಲಷ್ಟೇ ಕಾರ್ತಿಕನೊಂದಿಗೆ ಮದುವೆಗೆ ಒಪ್ಪಿಗೆ ಸೂಚಿಸುತ್ತಾಳೆ. ಇದು ಕಾದಂಬರಿಯೂ ವಸ್ತು.
ಬೆಳಗಾವಿ ತಾಲ್ಲೂಕು ಸುಳೇಭಾವಿಯಯವರಾದ ಪಾರ್ವತಿ ಅವರು ಗ್ರಾಮ ಪಂಚಾಯಿತಿ ಆಡಳಿತ ಸಹಾಯಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ಶಾಂಗ್ರೀ- ಲಾ ಅಕಾಡೆಮಿ ನಿರ್ದೇಶಕಿಯಾಗಿ ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ತೊಡಗಿದ್ದಾರೆ. ನೇಕಾರರ ಬದುಕು ಬವಣೆಯನ್ನು 'ಮಿಲನ' ಕಾದಂಬರಿಯಲ್ಲಿ ನೈಜವಾಗಿ, ಕಲಾತ್ಮಕವಾಗಿ ಕಟ್ಟಿಕೊಟ್ಟ ಪಾರ್ವತಿ ಪಿಟಗಿ ಐದು ಕಾದಂಬರಿ, ಒಂದು ಕಥಾ ಸಂಕಲನ, ಲೇಖನ ಸಂಕಲನ ಪ್ರಕಟಿಸಿದ್ದಾರೆ. ಅವರ ಹಲವು ಕಥೆ, ಕಾದಂಬರಿ, ಲೇಖನಗಳು ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. `ಮಿಲನ' ಕಾದಂಬರಿಗೆ ದೇವರ ದಾಸಿಮಯ್ಯ ಸಾಹಿತ್ಯ ಶ್ರೀ ಪ್ರಶಸ್ತಿ ಸಂದಿದೆ. ಅವರ ಬಹುತೇಕ ಕಥೆ, ಕಾದಂಬರಿಗೆ ಪ್ರಶಸ್ತಿಗಳು ಸಂದಿವೆ. ಬೆಳಗಾವಿ ಜಿಲ್ಲೆಯ ಆಡುಭಾಷೆಯಲ್ಲಿ ...
READ MORE