ಕಾದಂಬರಿಯು ಹಲವು ವಿಚಾರಗಳ ಕಡೆಗೆ ಚಲಿಸುವಂತದ್ದು. ಜಂಗಮವು ಸ್ಥಾವರವಾಗುವುದನ್ನು ತಂದು ನಿಲ್ಲಿಸುವ, ಆಯಾ ಪಾತ್ರಕ್ಕೆ ಸನ್ನಿವೇಶಕ್ಕೆ ತಕ್ಕಂತೆ ಬಳಸಲಾಗುವ ಭಾಷಾ ನಿರೂಪಣೆ ಈ ಕಾದಂಬರಿಯಲ್ಲಿ ಮುಖ್ಯವಾಗಿದೆ.
ಈ ಕಾದಂಬರಿಯಲ್ಲಿನ ಸಂಬಂಧಗಳು ಮತ್ತು ಸಂಘರ್ಷಗಳು ಭಾವುಕತೆಯ ಭವವಾಗಿಯೂ, ಭಾವವಾಗಿಯೂ ಮಾರ್ಪಟ್ಟಿದೆ. ನಂಬಿಕೆಗಳು, ಸತ್ಯಗಳು, ನೈತಿಕ ನಿಲುವುಗಳು ಮತ್ತು ತೀರ್ಪುಗಳು ಒಂದು ಆವರ್ತನೆಯನ್ನು ತತ್ ಕ್ಷಣ ಗ್ರಹಿಸುವ ಕ್ರಮದ ಫಲವಾಗುತ್ತದೆ ಎನ್ನುವ ಅಂಶದ ಜೊತೆಗೆ ಕಟ್ಟುವ , ಕೆಡಹುವ, ಮತ್ತೆ ಕಟ್ಟುವ ಈ ಆವರ್ತನೆಯ ಒಳನೋಟ ಈ ಕೃತಿಯ ವಿಶೇಷತೆ.
"ಪೂರ್ಣತೆಯನ್ನು ಅರಿಯಲು ಆಯ್ದ ಅಪೂರ್ಣತೆಯ ಹಾದಿ, ಕೂನೆ-ಮೊದಲು ಎರಡೂ ಇಲ್ಲದ, ಒಂದರೊಳಗೊಂದು ಸಂಯೋಗಗೊಂಡ ಹಾದಿ. ಮೊದಲಿಗನೂ ಅಲ್ಲದ, ಕೊನೆಯವನೂ ಅಲ್ಲದ ಪ್ರತಿ ವ್ಯಕ್ತಿಯೂ ಹುಡುಕಿಕೊಂಡು ಹೋಗುವ ಹಾದಿ. ಆದರೆ, ಆತನ ಮಟ್ಟಿಗೆ ಇದು ಹೊಚ್ಚ ಹೊಸತಾದ ಹಾದಿ! ನುಡಿ ಹುಟ್ಟಿ, ಪದಗಳು ಸಾಲುಗಳಾಗಿ, ಮೌನ ಕೊನೆಗೊಳ್ಳುವ ಹಾದಿ. . . ಅಂಗದ ಧರೆ, ಕಟ್ಟುವಿಕೆ, ಕಡಹುವಿಕೆ, ರಚನೆ-ವಿಸರ್ಜನೆ, ಕಾರ್ಯ-ಕಾರಣ ಮತ್ತು ಪರಿಣಾಮಗಳ ಬಹುಮುಖ್ಯ ತಾತ್ವಿಕ ಪ್ರಶ್ನೆಗಳನ್ನು ಎತ್ತುತ್ತದೆ. ಈ ಕ್ರಿಯೆಗಳಲ್ಲಿ ತಾನೇ ಕೇಂದ್ರವೆಂದು ಭಾವಿಸುವ ಹುಲುಮಾನವರ ಪಾತ್ರವೇನು? ಎಂದು ಅರಿಯಲು ಯತ್ನಿಸುತ್ತದೆ" ಎನ್ನುತ್ತಾರೆ ಕಾದಂಬರಿಕಾರ ಕೇಶವ ಮಳಗಿ
ಸದ್ಯ ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಆ್ಯಂಡ್ ಟೆಕ್ನಾಲಜಿಯಲ್ಲಿ ಬೋಧಕರಾಗಿರಾಗಿರುವ ಕೇಶವ ಮಳಗಿ ಅವರು ಮೂಲತಃ ಬಳ್ಳಾರಿ ಜಿಲ್ಲೆಯವರು. ಕನ್ನಡದ ಪ್ರಮುಖ ಕಥೆಗಾರರಲ್ಲಿ ಒಬ್ಬರಾಗಿರುವ ಮಳಗಿ ಅವರು 80ರ ದಶಕದಲ್ಲಿ ತಮ್ಮ ಬರವಣಿಗೆ ಆರಂಭಿಸಿದರು. ತಮ್ಮ ವಿಶಿಷ್ಟ ನುಡಿಗಟ್ಟು, ಶೈಲಿ, ದನಿ ಬನಿಯ ಕತೆಗಳಿಂದ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಮಳಗಿ ಅವರು ಜನಸಾಮಾನ್ಯರು ಬದುಕನ್ನು ಘನತೆ, ಪ್ರೀತಿಯಿಂದ ಜೀವಿಸುವ ರೀತಿಯನ್ನು ಕತೆಗಳಲ್ಲಿ ಚಿತ್ರಿಸುತ್ತಾರೆ. ಆಪ್ತವಾಗಿ ಕತೆ ಹೇಳುವಂತೆ ಬರೆಯುವ ಮಳಗಿ ಅವರ 'ಕಡಲ ತೆರೆಗೆ ದಂಡೆ', 'ಮಾಗಿ ಮೂವತ್ತೈದು', 'ವೆನ್ನೆಲ ದೊರೆಸಾನಿ', 'ಹೊಳೆ ...
READ MORE