ಈ ಕಾದಂಬರಿಯ ಮುಖ್ಯವಿಷಯ ಪ್ರೇಮ,ಆ ಹುಡುಗನನ್ನು ಮಾತನಾಡಿಸಬೇಕೆಂದು ಅವಳ ಹೃದಯ ಹಾತೊರೆಯಿತು. ಅವನನ್ನು ಅಪ್ಪಿಕೊಳ್ಳಬೇಕೆಂಬ ಬಯಕೆ. ಅದನ್ನೇ ಕಾರ್ಯರೂಪಕ್ಕೆ ತರುವ ಶಕ್ತಿ ಅವಳಿಗಿರಲಿಲ್ಲ. “ಇಲ್ಲಿ ಬಾ” ಎಮ್ದು ಸನ್ನೆ ಮಾಡಿದಳು. ಅಳುಕಿಕೊಂಡು ಹೆಜ್ಜೆ ಇಟ್ಟರು ಅದರಲ್ಲಿ ದೃಢತೆ ಇತ್ತು. ಅದು ಅಪರಿಚಿತವಲ್ಲ. ಕ್ರಾಪಿನಲ್ಲಿ ಕೈಯಾಡಿಸಿದಳು. ಅರ್ಥವಾಗದ ಅಲೌಕಿಕ ಸಂತಸ. “What is your name?” ಮೃದುವಾದ ಪ್ರಶ್ನೆ. “My name is Rajesh. Master Giridhar” ಎಂದು ಹೇಳೀ ಓಡಿಬಿಟ್ಟ. ಹತ್ತಿರಕ್ಕೆ ಬಂದ ತಂದೆಯ ಕೈ ಹಿಡಿದು ನಿಧಾನವಾಗಿ ಸಾಗಿಹೋದ. ಕಾರಿನ ಬಾನೆಟ್ ಎತ್ತಿ ರಿಪೇರಿಯಲ್ಲಿ ತೊಡಗಿದ್ದ ರಾಜು ಹತ್ತಿ ಕೂತು ಸ್ಟಾರ್ಟ್ ಮಾಡಿದ. ಸುಮನ್ ಯಾಂತ್ರಿಕವಾಗಿ ಹತ್ತಿ ಕೂತಳು. ಅವಳ ಹೃದಯ “ಗಿರಿಧರ್...ಗಿರಿಧರ್” ಎಂದು ಜಪಿಸುತ್ತಿತ್ತು.ಇಂತಹ ಹಲವು ಕ್ಷಣಗಳು ಓದುಗರನ್ನ ಈ ಕಾದಂಬರಿಯು ಎದುರುಗೊಳ್ಳುತ್ತದೆ.
ಕನ್ನಡ ಕಾದಂಬರಿ ಲೋಕದ ಅನನ್ಯ ಪ್ರತಿಭೆ ಸಾಯಿಸುತೆ. ತಮ್ಮ ಕಾದಂಬರಿಗಳ ಮೂಲಕ ಹೆಂಗಳೆಯರ ಮೆಚ್ಚುಗೆಗೆ ಪಾತ್ರವಾದ ಲೇಖಕಿ. ಅವರು ಕನ್ನಡ ಓದುಗ ವಲಯ ವಿಸ್ತರಿಸಿದ ಬರಹಗಾರ್ತಿ ಕೂಡ. ಸಾಯಿಸುತೆ ಅವರು ಕೋಲಾರದಲ್ಲಿ 1942ರ ಆಗಸ್ಟ್ 20ರಂದು ಜನಿಸಿದರು. ಅವರ ಹೆಸರು ರತ್ನ. ’ಸಾಯಿಸುತೆ’ ಎಂಬುದು ಕಾವ್ಯನಾಮ. ತಂದೆ ವೆಂಕಟಪ್ಪ ಮತ್ತು ತಾಯಿ ಲಕ್ಷಮ್ಮ. ಕೋಲಾರದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು, ಓದುವ ಹಂಬಲದಿಂದ ಕಾಲೇಜು ಮೆಟ್ಟಿಲೇರಿದ್ದರು. ಆದರೆ, 16ನೇ ವಯಸ್ಸಿಗೆ ಮದುವೆಯಾದರು. ನಂತರದಲ್ಲಿ ಅವರಿಗೆ ನೆರವಾದವರು ಸಾಹಿತ್ಯಪ್ರೇಮಿ ಪತಿ ಅಶ್ವತ್ಥನಾರಾಯಣ. ಮನೆಯಲ್ಲಿದ್ದ ಸಾಹಿತ್ಯ ಪುಸ್ತಕಗಳನ್ನು ಓದುತ್ತಾ ಸಾಹಿತ್ಯದ ಒಲವು ಬೆಳೆಸಿಕೊಂಡ ...
READ MORE