'ಮನಸು ಮಂದಾರ' ಲೇಖಕಿ ಸಿ.ಎನ್ ಮುಕ್ತಾ ಅವರ ಸಾಮಾಜಿಕ ಕಾದಂಬರಿ. ಈ ಕೃತಿಯು ಕೌಟುಂಬಿಕ ಕತಾ ಹಿನ್ನೆಲೆಯನ್ನು ಒಳಗೊಂಡಿದೆ. ತಾಯಿ ಮತ್ತು ಮಗನ ಸಂಬಂಧಗಳ ಮಹತ್ವವನ್ನುಇಲ್ಲಿ ಕಾಣಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನ ಮನದಲ್ಲಾಗುವ ತಳಮಳ, ಸಂತಸ, ಚಂಚಲತೆ, ಪ್ರೇಮ, ಸಂಕೋಚ, ಮಮತೆ, ಮತ್ಸರ, ತ್ಯಾಗ ಮನೋಭಾವ ಹೀಗೆ ಎಲ್ಲವನ್ನುಈ ಕಾದಂಬರಿ ವಿವರಿಸುತ್ತಾ ಹೋಗುತ್ತದೆ. ನಕಾರಾತ್ಮಕ ಘಟನೆ ಸಂಭವಿಸಿದಾಗ ಸಮಾಜ ನೋಡುವ ರೀತಿ ಮತ್ತು ನೈಜ ಸನ್ನಿವೇಶ ಏನು ಎಂಬುದರ ಬಗೆಗೆ ಲೇಖಕಿಯು ಸರಳ ಭಾಷೆಯಲ್ಲಿ ಪ್ರಸ್ತುತ ಪಡಿಸಿದ್ದಾರೆ.
ಮುಕ್ತಾ ಸಿ. ಎನ್. ಅವರು ಮೂಲತಃ ಚಿತ್ರದುರ್ಗದವರು. 1951 ಏಪ್ರಿಲ್ 30ರಂದು ಜನನ. ಸಹಾಯಕ ಶಿಕ್ಷಕಿಯಾಗಿ ನಂಜನಗೂಡಿನ ಬಾಲಕಿಯರ ವಸತಿ ಸಹಿತ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಸಿ.ಬಿ ನರಸಿಂಹಮೂರ್ತಿ, ತಾಯಿ – ಸಿ.ಎನ್ ಕಮಲಮ್ಮ. ಚಿಕ್ಕಂದಿನಲ್ಲೇ ಸಾಹಿತ್ಯದ ಒಡನಾಟದಲ್ಲಿ ಬೆಳೆದ ಮುಕ್ತಾ ಅವರು ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಬರಹಗಳ ಮೂಲಕ ಮನೆಮಾತಾಗಿದ್ದಾರೆ. 1953 ರಲ್ಲಿ ಆಶ್ರಯ, 1975 ರಲ್ಲಿ ಮರೀಚಿಕೆ, 1982 ರಲ್ಲಿ ವಿಮುಕ್ತೆ, 1983 ರಲ್ಲಿ ದಡ ಸೇರಿದ ನೌಕೆ, ಸುವರ್ಣ ಸಂಕೋಲೆ, ನನಸಾಗದ ಕನಸು, ಸುಖದ ಸೋಪಾನಗಳು, ಒಲವಿನ ಉಯ್ಯಾಲೆ, ಕಳೆದು ಹೋದವರು ಮುಂತಾದವುಗಳು ಇವರ ...
READ MORE