ಲೇಖಕ ಅನುಷ್ ಎ ಶೆಟ್ಟಿಯವರ ಕಾದಂಬರಿ ಕಳ್ಬೆಟ್ಟದ ದರೋಡೆಕೋರರು. ಈ ಕಾದಂಬರಿಯನ್ನು ಬಿಡುಗಡೆಗೊಳಿಸಿದವರು ನಿರ್ದೇಶಕ ಬಿ.ಸುರೇಶ ಮತ್ತು ಬರಹಗಾರರಾದ ಜೋಗಿ ಅವರು.
ಈ ಕಾದಂಬರಿಯು ಸಿನಿಮಾವಾಗಿ ಮಾರ್ಪಟ್ಟಿದೆ. ಹನಗೋಡು ಎಂಬ ಹಳ್ಳಿಯಲ್ಲಿ ಇದ್ದಕ್ಕಿದ್ದಂತೆ ಶುರುವಾಗುವ ದರೋಡೆಗಳಿಗೆ ಕಾರಣರಾದ ಕಳ್ಬೆಟ್ಟದ ದರೋಡೆಕೋರರ ಜಾಡನ್ನರಸಿ ಹೊರಡುವ ಊರ ಜನ ಮತ್ತು ಊರ ಮುಗ್ಧ ಹುಡುಗರ ಕಥೆ ಇದಾಗಿದೆ.
ಹಳ್ಳಿಯೊಂದರಲ್ಲಿ ಇರುವ ಆನೆ ಸಾಲು ಮತ್ತು ಕೋಟಿ ಬೀದಿಯಲ್ಲಿರುವ ಎರಡು ಓಣಿಯ ಹುಡುಗರು ಯಾವಾಗಲೂ ದ್ವೇಷ ಸಾಗಿಸುತ್ತಾ ಹೊಯ್ದಾಡುವ ಚಿತ್ರಣವಿದೆ. ಆ ಊರಿನಲ್ಲಿರುವ ಬೆಟ್ಟದಲ್ಲಿ ರಾತ್ರಿ ಸಮಯದಲ್ಲಿ ಆಗುವ ದರೋಡೆಯಿಂದಾಗಿ ಊರ ಜನರು ತಮ್ಮ ಮನೆಗಳಿಂದ ಹೊರಬರುವುದಿಲ್ಲ. ನಂತರದ ದಿನಗಳಲ್ಲಿ ಒಬ್ಬೊಬ್ಬರೇ ಕಾಣೆ ಆಗುವ ಕುತೂಹಲ, ವಿಸ್ಮಯಕಾರಿ ಕಥಾಹಂದರವನ್ನು ಈ ಕಾದಂಬರಿ ತೆರೆದಿಡುತ್ತದೆ.
ಅನುಷ್ ಎ ಶೆಟ್ಟಿ ಜನಿಸಿದ್ದು ಮಂಗಳೂರಿನಲ್ಲಿ. ವಿದ್ಯಾಭ್ಯಾಸ ಹುಣಸೂರು, ಮೈಸೂರಿನಲ್ಲಿ. ಮೈಸೂರು ವಿಶ್ವವಿದ್ಯಾನಿಲಯದಿಂದ ವಿದ್ಯುನ್ಮಾನ ಮಾಧ್ಯಮದಲ್ಲಿ ಎಂ.ಎಸ್ಸಿ ಪದವಿ ಪಡೆದಿರುವ ಇವರು ಕನ್ನಡಪ್ರಭ, ಸಾಧ್ವಿ ದಿನಪತ್ರಿಕೆಗಳಲ್ಲಿ, ಜೀ ಕನ್ನಡ ವಾಹಿನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ. 15 ವರ್ಷಗಳ ಕಾಲ ಮೃದಂಗ ವಾದನ ಕಲಿತ ಇವರು, ಅನೇಕ ಲಯವಾದ್ಯಗಳನ್ನು ನುಡಿಸಬಲ್ಲವರಾಗಿದ್ದು, ತಮ್ಮ ಗೆಳೆಯರೊಂದಿಗೆ ಕೂಡಿ ಆರಂಭಿಸಿರುವ ‘ನಾವು’ ಬ್ಯಾಂಡ್ ಮೂಲಕ ಸಂಗೀತದಲ್ಲಿ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಕಳೆದ 8 ವರ್ಷಗಳಿಂದ ರಂಗ ಸಂಗೀತವನ್ನೂ ಮಾಡುತ್ತ ದೇಶಾದ್ಯಂತ ಓಡಾಡುತ್ತಿದ್ದಾರೆ. ಪ್ರಸ್ತುತ, ಗೆಳೆಯ ಶ್ರೀವತ್ಸ ಅವರೊಂದಿಗೆ ‘ಇವೆಂಟೊ’ ಎಂಬ ಇವೆಂಟ್ ಕಂಪೆನಿ ಮತ್ತು ಅನುಗ್ರಹ ...
READ MORE