‘ತತ್ರಣಿ’ ದೀಪಾ ಜೋಶಿ ಅವರು ಬರೆದಿರುವ ಗತ ಶತಮಾನದ ಉತ್ಕ್ರಾಂತಿ ಕಥನವುಳ್ಳ ಕಾದಂಬರಿಯಾಗಿದೆ. ಕಳೆದ ಶತಮಾನದ ಪೂರ್ವಾರ್ಧದಲ್ಲಿ ಆರಂಭವಾಗಿ, ಉತ್ತರಾರ್ಧದಲ್ಲಿ ಕೊನೆಗೊಳ್ಳುವ ನಡುವಿನ ಸುಮಾರು ಐವತ್ತು ವರ್ಷಗಳ ಕಥಾ ಜಗತ್ತು ದೀಪಾ ಜೋಶಿಯವರು ಈ ಕಾದಂಬರಿಯಲ್ಲಿ ಅನಾವರಣಗೊಳ್ಳುತ್ತದೆ. ಉತ್ತರ ಕರ್ನಾಟಕದ ರಾಣೆಬೆನ್ನೂರು ಕೇಂದ್ರವಾಗುಳ್ಳ ಮಾಧ್ವ ವೈದಿಕ ಕುಟುಂಬವೊಂದರ ಬದುಕಿನ ಹೋರಾಟದ ಕಥೆ ಇಲ್ಲಿದೆ.
ಹುಚ್ಚಾಚಾರ್‍ರ ಸಾವಿನ್ನ ಸನ್ನಿವೇಶದಿಂದ ಆರಂಭವಾಗುವ ಈ ಕಥಾನಕವು, ಅವರ ಮಗ ಭುಜಂಗಾಚಾರ್‍ರು ಬದುಕಿನ ಏಳುಬೀಳುಗಳ ಹೋರಾಟದಲ್ಲಿ ಸುದೀರ್ಘ ಬಾಳ ಯಾತ್ರೆಗಳಲ್ಲಿ, ತೀವ್ರ ಬಡತನ, ಸಾವು, ದುಃಖ, ಒದ್ದಾಟಗಳನ್ನು ಎದುರಿಸುತ್ತಾ, ಆ ಕುಲುಮೆಯಲ್ಲಿ ಬೆಂದು ಮಾಗುತ್ತಾ, ಎಂದೂ ಸಹನೆಯನ್ನು ಕಳೆದುಕೊಳ್ಳದೆ ಘನತೆಯಿಂದ ಬಾಳುತ್ತಲೇ ಸ್ಥಿತಪ್ರಜ್ಞ ಸ್ಥಿತಿಗೆ ತಲುಪುವ ಹಂತದಲ್ಲಿ ಅಂತ್ಯವಾಗುತ್ತದೆ.
ಕಳೆದು ಹೋದ ಕಾಲಘಟ್ಟವೊಂದನ್ನು ಪುನರ್ ಸೃಷ್ಟಿಸುವ ಕಾರ್ಯದಲ್ಲಿ ದೀಪಾ ಜೋಶೀಯವರು ತೋರಿದ ಸಂಯಮ, ಆ ಕಾಲದ ಶಾಸ್ತ್ರಗಳು ರೀತಿಮ ರಿವಾಜುಗಳು, ಸಾಮಾಜಿಕ ಸ್ಥಿತಿಗತಿಗಳು. ಮೊದಲಾದ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿ, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ದಾಖಲಿಸಿದ ರೀತಿ ಅಪರೂಪದ್ದು.
ಧಾರವಾಡದಲ್ಲಿ ಜನಿಸಿದ ಡಾ. ದೀಪಾ ಜೋಶಿ ಅವರು ಸದ್ಯ ಬೆಂಗಳೂರು ನಿವಾಸಿ. ಅನೇಕ ಖ್ಯಾತ ಮಾಸಿಕ, ಪತ್ರಿಕೆಗಳಲ್ಲಿ ನಿಯಮಿತವಾಗಿ ಲೇಖನ ಪ್ರಕಟಿಸಿದ್ದಾರೆ. ಉತ್ಠಾನ ಪತ್ರಿಕೆ ಸ್ಫರ್ಧೆಯಲ್ಲಿ ಎರಡನೇ ಬಹಿಮಾನ ಪಡೆದ ಕತೆಗಾರ್ತಿ ಅವರು. ಬದುಕು ಬಣ್ಣ ಮೊದಲ ಕಥಾ ಸಂಕಲನ. ಪ್ರಸ್ತುತ ಸಂಕಲನ ಕಸಾಪ ದತ್ತಿ ಪ್ರಶಸ್ತಿ ಗಳಿಸಿದೆ. ...
READ MORE