ತ.ರಾ.ಸು. ಕಥೆ ಹೇಳುವುದರಲ್ಲಿ ನಿಸ್ಸೀಮರು. ಅವರ ಭಾಷೆಯ ಹರವು ವಿಶಾಲವಾದದ್ದು. ಚಿತ್ರಮಯವಾದ ವರ್ಣನೆ, ಅಂತಃಕರಣ ಉಕ್ಕಿ ಬರುವ ಸಂಭಾಷಣೆ, ರೋಮಾಂಚಕಾರಕ ಕಾರ್ಯಕಾರಣಪುರಸ್ಸರವಾದ ಘಟನೆಗಳ ನಿರೂಪಣೆ, ಸಿಡಿಲಿನಂತಹ ಭಾವಗಳು, ಪಾರಿಜಾತ ಸ್ಪರ್ಶದಂತಹ ಮಾರ್ದವತೆ, ವೀರ್ಯವತ್ತಾದ ಭಾಷೆ, ಪರಿಣಾಮಕಾರಿಯಾದ ದೃಶ್ಯಗಳ ನಿರೂಪಣೆ ಎಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಶೈಲಿ ಇವನ್ನು ಓದಿಯೇ ಆನಂದಿಸಬೇಕು.
ತಳುಕು ರಾಮಸ್ವಾಮಯ್ಯ ಸುಬ್ಬರಾಯ(ತ.ರಾ.ಸು) ಹುಟ್ಟಿದ್ದು 1906 ಜೂನ್ 12 ಚಿತ್ರದುರ್ಗ ಜಿಲ್ಲೆಯ ಚೆಳ್ಳೆಕೆರೆ ತಾಲ್ಲೂಕಿನ ತಳುಕು ಎಂಬ ಗ್ರಾಮದಲ್ಲಿ. ಮೂಲ ಆಂಧ್ರಪ್ರದೇಶದವರು. ತಂದೆ ರಾಮಸ್ವಾಮಯ್ಯ ಅವರು ತಳುಕು ಗ್ರಾಮಕ್ಕೆ ಬಂದು ನಂತರ ಚಿತ್ರದುರ್ಗದಲ್ಲಿ ಪ್ಲೀಡರ್ ಆಗಿದ್ದರು. ಸುಬ್ಬಾರಾಯರು ಇಂಟರ್ ಮೀಡಿಯೆಟ್ನಲ್ಲಿದ್ದಾಗ ದೇಶದ ಸ್ವಾತಂತ್ಯ್ರ ಚಳವಳಿಯಲ್ಲಿ ಧುಮುಕಿದರು. ಪ್ರಮುಖ ಕೃತಿಗಳು: ಕಂಬನಿಯ ಕುಯಿಲು, ರಕ್ತರಾತ್ರಿ, ದುರ್ಗಾಸ್ತಮಾನ, ನೃಪತುಂಗ, ಸಿಡಿಲ ಮೊಗ್ಗು, ಶಿಲ್ಪಶ್ರೀ, ಕಸ್ತೂರಿ ಕಂಕಣ, ತಿರುಗುಬಾಣ-, ಈ ಕಾದಂಬರಿಗಳು ಬರೆಹಾ ಕೌಶಲ್ಯಕ್ಕೆ ಹಿಡಿದ ಕನ್ನಡಿ. ಚಲನಚಿತ್ರವಾದ ಕಾದಂಬರಿಗಳು: ಚಂದವಳ್ಳಿಯ ತೋಟ, ಹಂಸಗೀತೆ (1956ರಲ್ಲಿ ಬಸಂತ ಬಹಾರ್ ಹೆಸರಲ್ಲಿ ಹಿಂದಿ ಚಲನಚಿತ್ರವಾಗಿತ್ತು.) ನಾಗರಹಾವು, ...
READ MORE