'ನಿಯತಿ' ಉಷಾ ಪಿ. ರೈ ಅವರ ಕೃತಿಯಾಗಿದೆ. ಕಥೆಯ ಪ್ರಮುಖ ಪಾತ್ರ ಪತ್ರಕರ್ತೆ ಮಾಧವಿಯದು. ಆಕೆಯ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಸುತ್ತ ಸುತ್ತುವ ಕಾದಂಬರಿ ಇದು. ಮಾಧವಿ ತುಂಬಾ ದಿಟ್ಟ ಹಾಗೂ ಸ್ವತಂತ್ರ ಪ್ರವೃತ್ತಿಯ ಅವಿವಾಹಿತ ಹೆಣ್ಣು. ಪ್ರಬುದ್ಧ ಹಾಗೂ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳುವ ಅವಳ ದೃಢ ಮನೋಭಾವ ನನ್ನನ್ನು ಪ್ರಭಾವಿತಗೊಳಿಸಿ ಸೆಳೆಯಿತು. ಇಂದಿನ ಆಧುನಿಕ ಯುವತಿಯರಿಗೆ ಸಮೀಕರಿಸಿ ಲೇಖಕಿ ಅವಳ ಪಾತ್ರವನ್ನು ನಿರೂಪಿಸಿದ್ದಾರೆ. ಆಕೆಯ ಕುಟುಂಬವೆಂದರೆ ಹೆತ್ತವರು, ಒಬ್ಬ ಅಣ್ಣ, ಅತ್ತಿಗೆ ಹಾಗೂ ಎರಡು ಜನ ಅಣ್ಣನ ಮಕ್ಕಳು. ಆಕೆಯ ತಾಯಿಯಾದ ತಾರಾ ಕೂಡ ಮತ್ತೊಂದು ಮುಖ್ಯ ಪಾತ್ರವಿಲ್ಲಿ. ಹಲವು ದಿನಗಳಿಂದ ಆಗಾಗ್ಗೆ ಹೊರಗೆ ಹೋಗುವುದು ಇಂತಾ ಕಾರಣ ನನಗೆ ಈ ಪುಸ್ತಕವನ್ನು ನಿರಂತರವಾಗಿ ಓದಲು ಸಾಧ್ಯವಾಗಲಿಲ್ಲ. ಹಾಗಿದ್ದರೂ ಪುರುಸೊತ್ತು ಮಾಡಿಕೊಂಡು ಹಿಡಿದಿಟ್ಟು ಕೂರಿಸಿಕೊಂಡು, ಓದಿಸಿ, ಗುಂಗಾಗಿ ಕಾಡಿದ ತುಂಬಾ ರೋಚಕವಾಗಿರುವ ಉತ್ತಮ ಕಾದಂಬರಿ. ಸಾಮಾನ್ಯವಾದ ಕೌಟುಂಬಿಕ ಜೀವನ, ಪ್ರೇಮ, ವಿವಾಹ, ಮಕ್ಕಳು ಇವುಗಳ ಸುತ್ತಲೇ ತಿರುಗುವ ಕಾದಂಬರಿಗಳಿಗಿಂತ ಒಂದಿಷ್ಟು ವಿಭಿನ್ನವಾದ ಓದು ಬಯಸುವ ನನ್ನ ಅಭಿರುಚಿಗೆ ತಕ್ಕಂತೆ ಕುತೂಹಲಕಾರಿಯಾಗಿ ಈ ಕಾದಂಬರಿ ಮೂಡಿ ಬಂದಿದೆ. ಮಹಿಳಾ ಪ್ರಧಾನ ಕಾದಂಬರಿಯಾಗಿದ್ದು ಒಂದಿಷ್ಟು ಪತ್ತೇದಾರಿಕೆಯೂ ಸೇರಿಕೊಂಡು ವಿಭಿನ್ನವಾದ ಓದಿನ ಅನುಭವ ನೀಡಿತು. ಅಲ್ಲಲ್ಲಿ ನಾಟಕೀಯ, ಸಿನಿಮೀಯ, ಅನಿರೀಕ್ಷಿತ ತಿರುವುಗಳನ್ನು ಹೊಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ 1945 ಮೇ 23 ರಂದು ಜನಿಸಿದರು. ಎಂ.ಎ ಪದವೀಧರರಾದ ಉಷಾ ಪಿ. ರೈ ಅವರ ತಂದೆ ಸ್ವಾತಂತ್ಯ್ರ ಹೋರಾಟಗಾರ ಹಾಗೂ ನವಯುಗ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ದಿ.ಕೆ ಹೊನ್ನಯ್ಯಶೆಟ್ಟಿ ಮತ್ತು ತಾಯಿ ಕೆ ಪದ್ಮಾವತಿ ಶೆಟ್ಟಿ. ಉಷಾ ಪಿ ರೈ ಅವರ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಡಗೊಂಡಿದ್ದು ಕನ್ನಡದ ಹಿರಿಯ ಲೇಖಕಿ. ಉಷಾ ಅವರ ಮೊದಲ ಕಾದಂಬರಿ “ಅನುಭಂದ”, 1974ರಲ್ಲಿ ಪ್ರಜಾಮತ ವಾರಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯ್ತು. ನಂತರ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉಷಾ ಅವರ ಹನಿಗವನಗಳು, ಕಾದಂಬರಿಗಳು, ಸಣ್ಣಕಥನಗಳು, ಪ್ರವಾಸ ಕಥನ, ...
READ MORE