ಹಣ ಸಂಪಾದನೆಯೊಂದೇ ಬದುಕಿನ ಪರಮೋದ್ದೇಶವೆಂದು ಭಾವಿಸಿ ಜೀವಿಸಿದ ಕಥಾನಾಯಕ, ಗಳಿಸಿದ್ದರ ಹಿಂದೆಯೇ ಒಂದೊಂದಗಿ ಕಳೆದುಕೊಂಡು ಬಂದಾಗ ಬದುಕಿನ ಅರ್ಥವನ್ನು ಕಂಡುಕೊಳ್ಳುತ್ತಾನೆ. ಮರದ ಕಾಂಡ ಎಷ್ಟೇ ಹಿರಿದಾಗಿ, ರೆಂಬೆ ಕೊಂಬೆ ಚಿಗುರು ಹೂ ಹಣ್ಣು ನೀಡುತ್ತಾ ಎಷ್ಟೆತ್ತರಕ್ಕೆ ಬೆಳೆದರೂ ಅದರ ಅಸ್ತಿತ್ವ ಉಳಿದಿರುವುದು ಬೇರಿನಲ್ಲಿ. ಭೂಮಿಯ ಫಲವತ್ತತೆಯನ್ನು ಹೀರಿ ಅದರ ಸತ್ವವನ್ನು ಒದಗಿಸದಿದ್ದರೆ ಮರ ಬದುಕಲು ಸಾಧ್ಯವೇ..? ಈ ಕಥೆಯ ಸಾರವೂ ಅದೇ ಆಗಿದೆ. ಬೇರು ಧರ್ಮಸ್ಥಳ ಕ್ಷೇತ್ರದ ಮಂಜುವಾಣಿ ಮಾಸಪತ್ರಿಕೆಯಲ್ಲಿ ಪ್ರಕಟವಾದ ಕಾದಂಬರಿ.
ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ವಿವೇಕಾನಂದ ಕಾಮತ್ ಅವರು 100ಕ್ಕೂ ಹೆಚ್ಚು ಕತೆ ಹಾಗೂ 60 ಕಾದಂಬರಿಗಳನ್ನು ಪ್ರಕಟಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಳಸದವರಾದ ವಿವೇಕಾನಂದ ಅವರು ಜನಿಸಿದ್ದು 1976ರ ಜನವರಿ 21ರಂದು. ಮಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಪದವಿ ಪಡೆದ ಈಗ ಅಲ್ಲಿಯೇ ಸ್ವಂತ ಉದ್ಯೋಗದಲ್ಲಿ ತೊಡಗಿದ್ದಾರೆ. ಸೊಗಸಾದ ಭಾಷೆ, ಸರಳ ಶೈಲಿ, ಆಕರ್ಷಕ ನಿರೂಪಣೆಗಳಿರುವ ಕತೆ ಬರೆಯುವ ವಿವೇಕಾನಂದ ಅವರು 1994ರಲ್ಲಿ ಬರವಣಿಗೆ ಆರಂಭಿಸಿದ ಅವರಿಗೆ ಕಾದಂಬರಿಯ ಪ್ರಕಾರದಲ್ಲಿ ಒಲವು. 40 ಕಾದಂಬರಿಗಳು, 150ಕ್ಕೂ ಹೆಚ್ಚು ಕಥೆ, 20 ಮಿನಿ ಕಾದಂಬರಿಗಳನ್ನು ರಚಿಸಿದ್ದಾರೆ. ಅವುಗಳು ನಾಡಿನ ಬಹುತೇಕ ...
READ MORE