ಮಹಾಶಿವ ನಾಯಕನಿಗೆ ಭಾರತ ಹಾಗೂ ಪಾಕಿಸ್ತಾನದ ಹಲವು ವಿಚಾರಗಳನ್ನು ಕನಸಿನಲ್ಲಿ ಬಂದು ತಿಳಿಸುವ ಕಾಲ್ಪನಿಕ ಕಾದಂಬರಿ ‘ಬೃಹತ್ ಭಾರತ’. ಈ ಪುಸ್ತಕದ ಪ್ರಕಾರ 2032ಕ್ಕೆ ಪಾಕಿಸ್ತಾನ ಎಂಬ ದೇಶವೇ ಇರದೆ ಅದು ಭಾರತದಲ್ಲಿ ವಿಲೀನವಾಗಿ ಬೃಹತ್ ಭಾರತವಾಗುತ್ತದೆ. ದಿನೇ ದಿನೆ ಆರ್ಥಿಕವಾಗಿ ಕುಗ್ಗುತ್ತಿರುವ ಪಾಕಿಸ್ತಾನ ಚೀನಾದ ಸಾಲ ತೀರಿಸಲಾಗದೇ ಚೀನ ಪಾಕಿಸ್ತಾನವನ್ನು ಕಬಳಿಸಲು ಮುಂದಾದಾಗ ಭಾರತ ಅದನ್ನು ತಡೆಯುವ ಎಲ್ಲ ಸಾಧ್ಯತೆಗಳನ್ನು ಲೇಖಕರು ಇಲ್ಲಿ ನೀಡಿದ್ದಾರೆ. ಒಂದೆಡೆ ಚೀನಾವನ್ನು ಎದುರಿಸಲಾರದೆ,ಇನ್ನೊಂದೆಡೆ ಭಯೋತ್ಪಾಕತೆಯನ್ನು ತಡೆಯಲಾರದೆ ಪಾಕಿಸ್ತಾನ ಭಾರತದಲ್ಲಿ ವಿಲೀನವಾಗುವ ಚಿತ್ರಣವನ್ನು ಈ ಕೃತಿಯಲ್ಲಿ ಕಾಣಬಹುದು.
ಲೇಖಕ ಬಿ. ಆರ್. ಚಂದ್ರಶೇಖರ ಬೇದೂರು ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಬೇದೂರು ಗ್ರಾಮದವರು. ಕಾನೂನು ಪದವೀಧರರು. ಸ್ನಾತಕೋತ್ತರ ಪತ್ರಿಕೋದ್ಯಮ ಡಿಪ್ಲೊಮಾ ಪದವೀಧರರು. 16ನೇ ವಯಸ್ಸಿನಲ್ಲೇ ಛಿದ್ರ ಎಂಬ ಕಾದಂಬರಿ ರಚಿಸಿದ್ದರು. 6 ಕನ್ನಡ ಕಾದಂಬರಿ ಹಾಗೂ ‘A Brilliant shadow’ ಎಂಬ ಇಂಗ್ಲಿಷ್ ಕಾದಂಬರಿ ರಚಿಸಿದ್ದಾರೆ. ವಾಸ್ತವಿಕ ಜಗತ್ತಿನ ಆಗು ಹೋಗುಗಳ ವಿಷಯ ಎತ್ತಿಕೊಂಡು ಆಧ್ಯಾತ್ಮದ ಹಿನ್ನೆಲೆಯಲ್ಲಿ ನೋಡುವುದು ಅವರ ಕಾದಂಬರಿಗಳ ವೈಶಿಷ್ಟ್ಯ. ‘ಯಮಮಾರ್ಗದಲ್ಲಿ ವೈತರಣೀ ನದಿ’, ‘ನೈಮಿಷಾರಣ್ಯ’, ‘ಅಜ್ಞಾತ’ ಅವರ ಪ್ರಮುಖ ಕಾದಂಬರಿಗಳು. ...
READ MORE