ಅಲ್ಲಿ ಯಾರೂ ಇಲ್ಲ

Author : ಮೊಗಳ್ಳಿ ಗಣೇಶ್

Pages 340

₹ 375.00




Year of Publication: 2023
Published by: ದೇಸಿ ಪುಸ್ತಕ
Address: #121, 13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು- 560040
Phone: 9448439998

Synopsys

‘ಅಲ್ಲಿ ಯಾರೂ ಇಲ್ಲ’ ಲೇಖಕ ಡಾ. ಮೊಗಳ್ಳಿ ಗಣೇಶ್ ಅವರ ಗಪದ್ಯ ಕಾದಂಬರಿ. ಈ ಕೃತಿಗೆ ಖ್ಯಾತ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಮೊಗಳ್ಳಿ ಗಣೇಶ್ ಕನ್ನಡ ಸಾಹಿತ್ಯದ ಮಹತ್ವದ ಗದ್ಯಕಾರರು. ಕಥನದ ಉದ್ದಕ್ಕೂ ಇಡಿಕಿರವ ಅನುಭವ ಗ್ರಂಥಿಗಳನ್ನು ಕಟ್ಟಿಕೊಳ್ಳುವ ಅವರ ಕಥನಕ್ಕೆ ನಾನು ಪ್ರಾರಂಭದಿಂದಲೂ ಮನಸೋತವನು. ಸೂಕ್ಷ್ಮ ಸಂವೇದನೆಯ ಓದುಗನಿಗೆ ಸವಾಲು ಒಡ್ಡುವ ಗಪದ್ಯ ಕಾದಂಬರಿಯೊಂದನ್ನು ಅವರು ಈಗ ರಚಿಸಿದ್ದಾರೆ. ಕಥೆಯ ಹಂಗಿಲ್ಲದ ಈ ಕಥನವು, ಕಾವ್ಯದಂತೆ ರೂಪಕ ಭಾಷೆಯಲ್ಲಿ ತನ್ನ ಕರುಳನ್ನು ಬಗಿಬಗಿದು ಬರವಣಿಗೆಯ ನೆಯ್ದೆಯಲ್ಲಿ ಹರಹಿಕೊಳ್ಳುವ ಕೆಲಸ ಮಾಡುತ್ತದೆ. ಮನುಷ್ಯನ ಪ್ರಜ್ಞೆಯ ವೇದಕ ತೊಳಲಾಟವೇ ಈ ಕೃತಿಯ ಕೇಂದ್ರವಾಗಿದೆ. ಆ ಮನುಷ್ಯ ಪ್ರಜ್ಞೆಯಾದರೋ ಹೆಣ್ಣು-ಗಂಡಾಗಿ ಸೀಳಕೊಳ್ಳುವ ಮೂಲಕ ಕಥೆಯಲ್ಲದ ಕಥನಕ್ಕೆ ನಾಯಕಿ ಅಲ್ಲದ ನಾಯಕಿ ಮೈದಾಳುತ್ತಾಳೆ. ಈ ಸ್ತ್ರೀ ಪ್ರಜ್ಞೆಯು, ಗಾಯಗೊಂಡ ಪುರುಷಪ್ರಜ್ಞೆಯ ಸುತ್ತ ಎಡೆಬಿಡದೆ ಭ್ರಮಿಸುತ್ತದೆ ಎಂದಿದ್ದಾರೆ ಎಚ್.ಎಸ್.ವಿ.

ಹಾಗೇ ಮೊಗಳ್ಳಿ ಈ ಕೃತಿಯನ್ನು ಗಪದ್ಯ ಕಾದಂಬರಿ ಎಂದು ಕರೆದಿದ್ದಾರೆ. ನಾನು ಈ ಕೃತಿಯನ್ನು ಸಾವಧಾನ ಮತ್ತು ಮೈತುಂಬಿದೆಚ್ಚರದಿಂದ ಒಂದು ಕಾವ್ಯವೆಂದೇ ಅನುಷ್ಠಾನ ಮಾಡಿದ್ದೇನೆ. ನಮ್ಮನ್ನು ಹಿಡಿದು ನಿಲ್ಲಿಸುವ ರೂಪಕಗಳು ಬರವಣಿಗೆಯುದ್ದಕ್ಕೂ ಇಡಿಕಿಲಿದಿವೆ. ಪ್ರಜ್ಞಾಪ್ರವಾಹ ಹರಿಹರಿದಂತೆ ಕೃತಿ ತನ್ನ ನಿಗೂಢವಾದ ಪಾತ್ರವನ್ನು ನಿರ್ಮಿಸಿಕೊಳ್ಳುತ್ತದೆ. ಉದ್ದಕ್ಕೂ ಹೆಣ್ತನದ ಬಗೆಗೆ ವಿಶೇಷವಾದ ವಿಸ್ಮಯ ಭಾವ, ತಾಯಿಯ ಕಾರುಣ್ಯಭಾರವನ್ನು ಒಳಗೊಂಡಂತೆ ವ್ಯಕ್ತವಾಗಿದೆ. ಪ್ರಾಚೀನ, ಆಧುನಿಕ, ಎಳಮೆ, ಮುಪ್ಪು, ವಿಷಾದ, ವಿಸ್ಮಯ, ಎಲ್ಲವೂ ಖೋಖೋ ಆಟದ ಆಟಗಾರರಂತೆ ಇಲ್ಲಿ ಕಂಭ ಸುತ್ತುವ ಕ್ರಿಯೆ ನಡೆಯುತ್ತದೆ.. ಕೊನೆಗೆ ಉಳಿಯತಕ್ಕದ್ದೇನು ಎಂದರೆ ಅಲ್ಲಿ ಏನೂ ಉಳಿಯದು ಎಂಬಂಥ ಹೃದಯವೇಧಕ ಉತ್ತರ ಪ್ರತಿಧ್ವನಿತವಾಗುತ್ತದೆ. ಇಂಥ ಘನವಾದ ಕೃತಿಯನ್ನು ರಚಿಸಿರುವ ಮೊಗಳ್ಳಿಯವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದಿದ್ದಾರೆ.

About the Author

ಮೊಗಳ್ಳಿ ಗಣೇಶ್
(01 July 1962)

ಕತೆಗಾರ ಮೊಗಳ್ಳಿ ಗಣೇಶ್ ಅವರು ಹುಟ್ಟಿದ್ದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ. ಬಾಲ್ಯದ ದಿನಗಳನ್ನು ಹಳ್ಳಿಯಲ್ಲಿ ಕಳೆದ ಮೊಗಳ್ಳಿ ಅವರು ತಮ್ಮ ಅನುಭವವನ್ನು ವಿಶಿಷ್ಟ, ವಿನ್ಯಾಸದಲ್ಲಿ ಸೊಗಸಾದ ಕಥೆಗಳನ್ನಾಗಿ ಕಟ್ಟಿಕೊಡಬಲ್ಲರು.  ಕನ್ನಡ ಕಥನ ಪರಂಪರೆಗೆ ಹೊಸತನ ನೀಡಿದ ಅವರು ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರು.  ಬುಗುರಿ, ಮಣ್ಣು, ಅತ್ತೆ, ಭೂಮಿ, ಕನ್ನೆಮಳೆ (ಕಥಾ ಸಂಕಲನಗಳು), ಮೊಗಳ್ಳಿ ಕಥೆಗಳು (ಆವರೆಗಿನ ಬಹುಪಾಲು ಕಥೆಗಳ ಸಂಕಲನ), ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಕಥೆಗಳು ನಾಲ್ಕು ಬಾರಿ ಬಹುಮಾನ ಪಡೆದಿವೆ- ಒಂದು ಹಳೆಯ ಚಡ್ಡಿ (1989), ಬುಗುರಿ (1990), ಬತ್ತ (1991), ...

READ MORE

Related Books