ಪ್ರಖ್ಯಾತ ವೈದ್ಯ, ಸಾಹಿತಿ, ಛಾಯಾಚಿತ್ರಗ್ರಾಹಕರಾದ ವೆಂಕಟಗಿರಿ ರಾವ್ ಅವರ ಕಾದಂಬರಿ ’ಅವದಾನ’.
ಪ್ರಸಿದ್ದ ಚಲನಚಿತ್ರ ನಿರ್ಮಾಪಕರಾದ ಪುಟ್ಟಣ್ಣ ಕಣಗಾಲ್ ಅವರು ’ಅಮೃತ ಘಳಿಗೆ’ ಹೆಸರಿನಲ್ಲಿ ಚಿತ್ರಸಿರುವ ಮೂಲ ಕಾದಂಬರಿ ’ಅವದಾನ’.
ಲೇಖಕರ ವೈದ್ಯಕೀಯ ಜೀವನದದಲ್ಲಿ ಕಂಡಂತಹ ಮನುಷ್ಯರ ಪ್ರವೃತ್ತಿ, ಸ್ವಭಾವ ಮತ್ತು ಗುಣ ಧರ್ಮಗಳ ವಿವಿಧ ಮುಖಗಳ ಚಹರೆಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ಅವುಗಳಲ್ಲಿ ಹಲವು ನಿಕಟವಾಗಿ ,ಮತ್ತು ಅಷ್ಟೇ ಗಾಢವಾಗಿರುವ ಪರಿಚಿತರನ್ನೂ ಅವರ ವ್ಯಕ್ತಿಗತ ಸಂಸ್ಕೃತಿ, ವಿದ್ಯೆ, ಪರಿಸರ, ಮತ್ತು ಸ್ವಭಾವಗಳಿಗೆ ಅನುಗುಣವಾಗಿ ಮೂಡುವ ಆಸೆ-ಆಕಾಂಕ್ಷೆ ಮತ್ತು ನಡೆನುಡಿಗಳನ್ನೂ ಸಹ ಈ ಕಾದಂಬರಿಯ ಪಾತ್ರಪೋಷಣೆಯಲ್ಲಿ ಬಿಂಬಿಸಲಾಗಿದೆ
.ದೊಡ್ಡೇರಿ ವೆಂಕಟರಾವ್ಅವರು ಚಿತ್ರಗ್ರಹಣ ಪ್ರವೀಣರೂ, ಕಾದಂಬರಿಕಾರರು. ಸಾಹಿತ್ಯ ಕೃಷಿ, ಛಾಯಾಗ್ರಹಣದಲ್ಲಿ ಪ್ರವೀಣರು. ಇವರು 1913 ಡಿಸೆಂಬರ್ 28 ರಂದು ಸೊರಬ ತಾಲ್ಲೂಕಿನ ದೊಡ್ಡೇರಿಯಲ್ಲಿ ಜನಿಸಿದರು. ಸಾಹಿತ್ಯ ಕೃಷಿಯ ಆರಂಭದಲ್ಲಿ “ಕಲಾಕುಮಾರ” ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ವೃತ್ತಿಯಲ್ಲಿ ವೈದ್ಯರು. ಇಪ್ಪತ್ತೈದಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಮುಕ್ತಾ, ಅವಧಾನ, ದೃಷ್ಟಿದಾನ ಅವರ ಪ್ರಮುಖ ಕಾದಂಬರಿಗಳು. ಪುಟ್ಟಣ್ಣ ಕಣಗಾಲ ಅವರ “ಅಮೃತ ಘಳಿಗೆ”, ಇವರ ಕಾದಂಬರಿ (ಅವಧಾನ) ಆಧಾರಿತವಾದದ್ದು. ಇಷ್ಟಕಾಮ್ಯ ಇವರ ಕಾದಂಬರಿ ಆಧಾರಿತ ಚಲನಚಿತ್ರವಾಗಿದ್ದು, ಅದೇ ಹೆಸರಿನಲ್ಲಿ ಪ್ರಕಟಗೊಂಡಿದೆ. ಅವರು ಮನೋವಿಜ್ಞಾನದ ವಿಷಯವನ್ನಾಧರಿಸಿ “ವಿಕೃತ ಕಾಮ, ಪ್ರಸವ ಜ್ಞಾನ, ಸಂತಾನ ಸಂಯಮ” ಎಂಬ ...
READ MORE