`ಹಲೋ’ ರವಿಬೆಳಗೆರೆ ಅವರ ಕೃತಿಯಾಗಿದೆ. ಇದಕ್ಕೆ ಭಾವನ ಬೆಳಗೆರೆ ಅವರ ಬೆನ್ನುಡಿ ಬರಹವಿದೆ; ರವಿ ಬೆಳಗೆರೆ! ಅವರು ಕನ್ನಡಿಗರ ಮನೆಮಾತು. ಅತ್ಯಂತ ಹೆಚ್ಚು ಬರೆದ, ಓದಿಸಿಕೊಳ್ಳುವ ಲೇಖಕ, ಪತ್ರಕರ್ತ, ಕಾದಂಬರಿಕಾರ, ಅನುವಾದಕ. ಅವರ ಒಂದು ಹೊಸ ಪುಸ್ತಕ ಬಿಡುಗಡೆಯಾಗುತ್ತದೆ ಅಂದರೆ ಸಾವಿರಾರು ಓದುಗರು ಕರ್ನಾಟಕದಾದ್ಯಂತ ಅದಕ್ಕಾಗಿ ಕಾಯುತ್ತಿದ್ದರು. ಅವರು ಒಂದು ವಿಷಯ, ಒಂದು ಸಂಗತಿ ಅಥವಾ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಬರೆದವರಲ್ಲ. ಮನುಷ್ಯ ಸಂಬಂಧಗಳು ಅವರ ಆಸಕ್ತಿಯ ಪ್ರಥಮ ವಿಷಯ. ಆದರೆ ಅವರು ಅತ್ಯಂತ ಆಸಕ್ತಿಯಿಂದ ದೇಶ, ಇತಿಹಾಸ, ಯುದ್ಧಗಳ ಬಗ್ಗೆ ಬರೆದಿದ್ದಾರೆ. ಯುದ್ದಗಳ ಪ್ರತ್ಯಕ್ಷವರದಿ ಮಾಡಿದ್ದಾರೆ. ಕಾರ್ಗಿಲ್ ಕದನ ಭೂಮಿ, ಅಫ್ಘಾನಿಸ್ತಾನ ಮತ್ತು ಪುಲ್ವಾಮಾದ ಮಹಾ ಯುದ್ಧರಂಗದಲ್ಲಿ ಓಡಾಡಿದ್ದಾರೆ. ಅಂತೆಯೇ ಅವರ ಕಾದಂಬರಿಗಳಲ್ಲಿ ಪ್ರೀತಿ, ತಂತ್ರ, ಅಂಡರ್‌ವರ್ಲ್ಡ್ ರಾಜಕಾರಣ, ಕಾಮ, ಟೆರರಿಸಂ ವಿಜೃಂಭಿಸಿವೆ. ಅವರ ತನಿಖಾ ವರದಿ ಪುಸ್ತಕವಾಗಿದೆ. ಮೂಲತಃ ರವಿ ಬೆಳಗೆರೆ ಕಥೆಗಾರರೆಂದೇ ಹೆಸರಾದವರು. ಅವರು ತಮ್ಮ ಇಷ್ಟದ ಕವಿ ಸಾಹಿರ್ ಲೂಧಿಯಾನವಿಯಿಂದ ಹಿಡಿದು ತೆಲುಗು ಲೇಖಕ ಗುಡಿಪಾಟು ವೆಂಕಟ ಚಲಂ ತನಕ ಅನೇಕರ ಜೀವನ ಕಥನ ಬರೆದಿದ್ದಾರೆ, ಅನುವಾದಿಸಿದ್ದಾರೆ. ರವಿ ಬೆಳಗೆರೆ ಪ್ರತೀವಾರ ಬರೆಯುವ 'ಹಲೋ' ಅಂಕಣ 'ಹಾಯ್ ಬೆಂಗಳೂರ್!' ಪತ್ರಿಕೆಯ ಜೀವಾಳವಾಗಿತ್ತು. ಅನೇಕ ರಾಜಕಾರಣಿಗಳ ಬದುಕಿನ ಆಗು-ಹೋಗುಗಳನ್ನು ತೆರೆದಿಡುತ್ತಾ ಹೋಗುವ ಈ ಅಂಕಣ ರಾಜಕಾರಣಿಗಳಿಗೆ ಬದುಕಿನ ಪಾಠವಾಗಿತ್ತು. ಈಗ ಈ ಅಂಕಣ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ.
ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...
READ MORE