'ಬೀಸಿ ಬಂದ ತಂಗಾಳಿ' ಹೆಚ್. ಜಿ. ರಾಧದೇವಿ ಅವರ ಕಾದಂಬರಿಯಾಗಿದೆ. ವೆಂಕೋಬರಾವ್ ಕಮಲಮ್ಮರಿಗೆ ಇಬ್ಬರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು. ಮೊದಲನೆಯವಳು ಜಯಂತಿ ಎರಡನೆಯವಳು ವಾಸಂತಿ. ಕಥೆ ವಾಸಂತಿಯ ವಧುಪರೀಕ್ಷೆಯೊಂದಿಗೆ ಪ್ರಾರಂಭವಿಗುತ್ತದೆ. ಬಿ. ಎಸ್.ಸಿ. ಓದಿದ್ದ ವಾಸಂತಿಗೆ , ಎಂ.ಎಸ್.ಸಿ ಓದಬೇಕು. ಅದರ ಜೊತೆಗೆ ಕಂಪ್ಯೂಟರ್ ಕೋರ್ಸ್ ಮಾಡಬೇಕೆಂಬ ಆಸೆ ಬಹಳವಿರುತ್ತದೆ. ಆದರೆ ಮಧ್ಯಮವರ್ಗದ ತಂದೆ-ತಾಯಿಯರು, ಮಕ್ಕಳಿಗೆ ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಬಯಕೆ. ಅಕ್ಕ ಜಯಂತಿ ಶಿಕ್ಷಕಿಯಾಗಿದ್ದು ಹಳ್ಳಿಯ ಬಹಳ ಅನುಕೂಲಸ್ತ ರೈತಾಪಿ ಕುಟುಂಬದ ಹುಡುಗನೊಂದಿಗೆ ಮದುವೆ ಗೊತ್ತಾಗಿರುತ್ತದೆ. ಹೀಗಾಗಿ ವಾಸಂತಿಗೂ ಬೇಗ ಗಂಡು ಹುಡುಕಿದರೆ ಇಬ್ಬರಿಗೂ ರಿಟೈರ್ಡ್ ಆಗೋದರೊಳಗೆ ಮದುವೆ ಮಾಡಿಮುಗಿಸಿ ಜವಾಬ್ದಾರಿ ಕಳೆದುಕೊಂಡರೆ ಉಳಿದ ಹುಡುಗರನ್ನು ಓದಿಸಿದರಾಯಿತು ಎಂಬ ಮನೋಭಾವ. ವಾಸಂತಿ ಅಕ್ಕ ಜಯಂತಿ ದುಡಿಯುತ್ತಿದ್ದುದರಿಂದ ಸ್ವಲ್ಪ ಒಡವೆ ಬಟ್ಟೆ ಬರೆ ಎಂದು ಮಾಡಿಕೊಂಡಿದ್ದಳು. ಜೊತೆಗೆ ಕಮಲಮ್ಮನಿಗೆ , ಅವಳ ಮೇಲೆ ಪ್ರೀತಿ ಸ್ವಲ್ಪ ಜಾಸ್ತೀನೆ ಇರುತ್ತದೆ.
ಕನ್ನಡ ಕಾದಂಬರಿಗಾರ್ತಿ ಹೆಚ್. ಜಿ.ರಾಧಾದೇವಿ ಅವರು ತಮ್ಮ ವೃತ್ತಿ ಜೀವನದಲ್ಲಿ 30ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದಾರೆ. ಹುಟ್ಟಿದ್ದು ಕೋಲಾರ ಜಿಲ್ಲೆಯ ಶಿಡ್ಲಘಟ್ಟದಲ್ಲಿ. ತಂದೆ ಗೋಪಿನಾಥಾಚಾರ್. ಪ್ರಾಥಮಿಕ ಶಾಲಾ ಶಿಕ್ಷಕರು.ಕೋಲಾರದಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.-ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಮುಂದಿನ ಓದಿಗೆ ತಡೆಯುಂಟಾಗಿ, ಮನೆ ಪಾಠ ಆರಂಭಿಸಿದರು.ಈ ಅನುಭವವೇ ಶಾಲಾ ಶಿಕ್ಷಕಿಯಾಗುವ ಅವಕಾಶಕ್ಕೆ ದಾರಿಯಾಯಿತು. ದುಡಿಯುವ ಮಹಿಳಾ ವರ್ಗ ಕುರಿತ ಅನೆಕ ಸಮಸ್ಯೆಗಳನ್ನು ತಮ್ಮ ಕತೆ ಕಾದಂಬರಿಗಳ ಮೂಲಕ ಬೆಳಕು ಚೆಲ್ಲಿದ್ದು, ಈ ಬಗ್ಗೆ ಹಲವಾರು ಲೇಖನಗಳನ್ನು ಸಹ ಬರೆದಿದ್ದಾರೆ. ‘ಅನುರಾಗ ಅರಳಿತು, ಒಲವಿನ ಸುಧೆ ಒಲಿದು ಬಂದ ಅಪ್ಸರೆ, ಕತ್ತಲಲ್ಲಿ ಕಂಡ ಮಿಂಚು, ...
READ MORE