ಯುವ ಲೇಖಕಿ, ಸೌಮ್ಯ ಅವರ ಕಾದಂಬರಿ ‘ಸಂದೇಹದ ಬಲೆ’ ಇದೊಂದು ಸಿನಿಮೀಯ ರೀತಿಯಲ್ಲಿ ಕುತೂಹಲ ಕೆರಳಿಸುವ ಕಾದಂಬರಿ. ಅಷ್ಟಲ್ಲದೆ ಹಗುರವಾಗಿ ಓದಿಸಿಕೊಂಡು ಹೋಗುವ ಈ ಕಾದಂಬರಿ ಗಂಭೀರವಾದ ಯೋಚನೆಗೆ ಹಚ್ಚುತ್ತದೆ. ಅದರಲ್ಲಿ ನಡೆಯುವ ಕೆಲವು ಘಟನೆಗಳು ಓದುಗರಿಗೆ ಪದೇ ಪದೆ ಮೆಲುಕು ಹಾಕುವಂತೆ ಮಾಡುತ್ತವೆ. ಈ ಕಥೆೆಯಲ್ಲಿ ಬರುವ ಕಥಾನಾಯಕಿ ಶ್ರೀಮಂತ ಮನೆತನದವಳಾಗಿದ್ದರೂ, ಈಕೆ ಪ್ರೀತಿಸಿ ಮದುವೆಯಾಗುವುದು ಒಬ್ಬ ಅನಾಥ ಹಾಗೂ ಬಡ ಯುವಕನನ್ನು ಆತನಿಗೆ ತಕ್ಕಂತೆ ತನ್ನನ್ನು ರೂಪಿಸಿಕೊಳ್ಳುತ್ತಾ, ಚಂದದ ಸಂಸಾರ ನಡೆಸಿಕೊಂಡು ಬರುತ್ತಿದ್ದ ಆಕೆಯ ಬದುಕಿನಲ್ಲಿ ಹಳೆಯ ಗೆಳಯನೊಬ್ಬನ ಪ್ರವೇಶವಾಗುತ್ತದೆ.
ಇದೇ ಕಾರಣದಿಂದ ಆಕೆಯ ನೆಮ್ಮದಿ ಹಾಳಾಗುವುದಲ್ಲದೆ, ಪತಿಯ ಮೇಲೂ ಸಂದೇಹ ಪಡುವಂತಾಗುತ್ತದೆ. ಹೀಗಿರುವಾಗ ತನ್ನನ್ನು ಒಂದು ರೀತಿಯ ಇಕ್ಕಟ್ಟಿಗೆ ಸಿಲುಕಿಸಿದ ಆ ಗೆಳೆಯ ಒಮ್ಮೆ ಆಕೆಯ ಮೇಲೆ ಬಲತ್ಕಾರ ಯತ್ನ ನಡೆಸಿದಾಗ, ಮಾನರಕ್ಷಣೆಗಾಗಿ ಕಥಾನಾಯಕಿ ಆತನನ್ನು ಕೊಂದು, ಜೈಲು ಸೇರುತ್ತಾಳೆ. ಹದಿನಾಲ್ಕು ವರುಷ ಜೈಲುವಾಸ ಮುಗಿಸಿ ಬಂದನಂತರ ಆಕೆಗೆ ಅರಿವಾಗುವ ಸಂಗತಿ, ತಪ್ಪು ಮಾಡದ ತನ್ನ ಪತಿ ಜೀವಂತವಿರುವುದು ಹಾಗೂ ಆತ ವಂಚನೆಗಾರನಲ್ಲವೆಂಬುದು. ಒಟ್ಟಿನಲ್ಲಿ ಸಂದೇಹದ ಹುಳುವನ್ನು ತಲೆಯಲ್ಲಿ ಬಿಟ್ಟುಕೊಂಡು, ತನ್ನ ಅವನತಿಗೆ ತಾನೇ ಕಾರಣಳಾಗುವ ಯುವತಿಯೊಬ್ಬಳ ಸುತ್ತ ಸುತ್ತುವ ಈ ಕಾದಂಬರಿ, ಓದುಗರನ್ನು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಸೌಮ್ಯಾಮೃತ ಕಾವ್ಯನಾಮದಿಂದ ಬರೆಯುವ ಸೌಮ್ಯ (ಸೋನು) ಅವರು ಬೆಂಗಳೂರು ನಿವಾಸಿ. ಎಂ.ಕಾಂ, ಎಂಬಿಎ ಅಧ್ಯಯನ ಮಾಡಿರು ಅವರು ನಾಲ್ಕು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಯಕೆಯ ಆ ದಿನಗಳು (ಕಥಾಸಂಕಲನ), ಪ್ರೀತಿಯ ಪಯಣ (ಕವನಸಂಕಲನ), ನಗುವ ಹೂ ಅತ್ತಾಗ (ಕಾದಂಬರಿ), ನಾವಿಬ್ಬರೇ ಇದ್ದಾಗ (ನನ್ನ ಮತ್ತು ಆತ್ಮದ ನಡುವಿನ ಸಂಭಾಷಣೆ)- ಕಾದಂಬರಿ ಪ್ರಕಟಿತ ಕೃತಿಗಳು. ಸೌಮ್ಯ ಅವರಿಗೆ ಸಾಹಿತ್ಯ ಚಿಗುರು, ಯುವ ಚೇತನ, ಕರ್ನಾಟಕ ಯುವರತ್ನ, ಕುವೆಂಪು ಕನ್ನಡರತ್ನ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ. ಬೆಳಕು ಸಂಸ್ಥೆಯ ಕಾರ್ಯಕ್ರಮಗಳ ನಿರ್ವಾಹಕ ಅಧ್ಯಕ್ಷೆ ಮತ್ತು ಬೆಳಕು ಪ್ರಕಾಶನದ ಅಧ್ಯಕ್ಷೆಯಾಗಿದ್ದಾರೆ. ಐವತ್ತಕ್ಕೂ ಹೆಚ್ಚು ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನವಾಚಿಸಿದ್ದೇನೆ. ಇಲ್ಲಿಯವರೆಗೂ 600ಕ್ಕೂ ...
READ MORE