‘ಐತರೇಯ ಮಹಾಪುತ್ರ’ ಕೃತಿಯು ಎಂ.ಎಸ್.ತಿಮ್ಮಪ್ಪ ಅವರ ಪೌರಾಣಿಕ ಕಾದಂಬರಿಯಾಗಿದೆ. ಐತರೇಯ ಬ್ರಾಹ್ಮಣ , ಐತರೇಯ ಅರಣ್ಯಕ ಹಾಗೂ ಐತರೇಯ ಉಪನಿಷತ್ತುಗಳನ್ನು ‘ಇತರಾ’ ಎಂಬ ಮಹಿಳೆಯ ಮಗನಾಗಿದ್ದ ‘ಐತರೇಯ’ ಎಂಬುವವನು ರಚಿಸಿದನು ಎಂದು ಸಾಂಪ್ರದಾಯಿಕವಾಗಿ ನಂಬಲಾಗಿದೆ. ಕಾದಂಬರಿಯಲ್ಲಿ ತಿಮ್ಮಪ್ಪನವರು ಸರಳವಾದ ಭಾಷೆಯನ್ನು ಬಳಸಿದ್ದಾರೆ. ವಿವರಣೆಗಳು ಮಿತವಾಗಿವೆ. ಸಾಕಷ್ಟು ಸಂಭಾಷಣೆಗಳಿವೆ. ಹಾಗಾಗಿ ಓದುವುದು ಸುಲಭ. ಅಲ್ಲಲ್ಲಿ ಹಿಂದೂ ಧರ್ಮದ ವಿವಿಧ ದರ್ಶನಗಳು ಬರುತ್ತವೆ. ಎಲ್ಲಿಯೂ ಧರ್ಮಜಿಜ್ಞಾಸೆಯನ್ನು ಆಳವಾಗಿ ತೆಗೆದುಕೊಂಡು ಹೋಗಿ ಓದುಗನನ್ನು ದಿಕ್ಕು ತಪ್ಪಿಸುವುದಿಲ್ಲ. ಹೇಳಬೇಕಾಗುವುದನ್ನು ಸರಳವಾಗಿ ಹೇಳಿ ಮುಗಿಸುವುದು ತಿಮ್ಮಪ್ಪನವರ ಹೆಗ್ಗಳಿಕೆಯಾಗಿದೆ.
ಎಂ.ಎಸ್ ತಿಮ್ಮಪ್ಪ ಅವರು ಲೇಖಕರು. ಇತಿಹಾಸ ಸಂಶೋಧನೆಯಲ್ಲಿ ಆಸಕ್ತರು. ಕೃತಿಗಳು : ಐತರೇಯ ಮಹಾಪುತ್ರ ...
READ MORE