‘ಸೋಲು ಗೆಲುವಿನ ಹಾದಿಯಲ್ಲಿ’ ಲೇಖಕಿ ಗೀತಾ ಬಿ.ಯು ಅವರ ಕಾದಂಬರಿ. ಸಾಹಿತ್ಯ ಮಾಧ್ಯಮದಲ್ಲಿ ಕವನ, ಕತೆ, ವಿಚಾರ ವಿಮರ್ಶೆ ಮತ್ತು ಕಾದಂಬರಿ ಹೀಗೆ ವಿವಿಧ ಮುಖಗಳು. ಇವುಗಳಲ್ಲಿ ಯಾವುದನ್ನು ರಚಿಸಹೋದರೂ ಅದಕ್ಕೊಂದು ಧ್ಯೇಯ, ವಸ್ತು ದರ್ಶನವಿರಬೇಕಾದುದು ಸಹಜ. ಸಾಹಿತಿ ಏನು ಹೇಳಬಯಸುತ್ತಾನೆ ಎಂಬುದನ್ನು ನಿಖರವಾಗಿ ಹೇಳಬಲ್ಲುದೇ ಸಾರ್ಥಕ ಸಾಹಿತ್ಯ. ಗೀತಾ ಅವರ ಮೊದಲ ಕಾದಂಬರಿಯಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಒತ್ತಿ ಹೇಳಿದ್ದಾರೆ. ಬದುಕು ಎಲ್ಲರದೂ ಒಂದೇ ತೆರನಾಗಿರದೇ, ವೈವಿಧ್ಯಮಯವಾಗಿರುತ್ತದೆ. ಅದರಲ್ಲಿಯ ಮೌಲ್ಯಗಳು ಬೇರೆ ಬೇರೆಯಾಗಿರುತ್ತವೆ. ಪಾತ್ರಸೃಷ್ಟಿಯಲ್ಲಿ ಬದುಕಿನ ಈ ಹಾದಿಗಳನ್ನು ನಿಖರವಾಗಿ ನವಿರಾಗಿ ಸೃಷ್ಟಿಸಿದ್ದಾರೆ. ಶೈಲಿಯಲ್ಲಿ ವಾಸ್ತವಿಕತೆ, ನಿರೂಪಣೆಯಲ್ಲಿ ನೈಜತೆ ಇದೆ.
ತಮ್ಮ ಕತೆ-ಕಾದಂಬರಿಗಳ ಮೂಲಕ ಕನ್ನಡ ಓದುಗರಿಗೆ ಚಿರಪರಿಚಿತ ಇರುವ ಗೀತಾ ಬಿ.ಯು. ಇದುವರೆಗೆ 12 ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ. ಬೆಂಗಳೂರಿನವರಾಗಿರುವ ಗೀತಾ ಅವರ ಕತೆ-ಕಾದಂಬರಿಗಳು ಕನ್ನಡದ ಮಾಸ ಹಾಗೂ ವಾರ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಅವರನ್ನು ಬಿಟ್ಟು ಇವರನ್ನು ಬಿಟ್ಟು ಇವರು ಯಾರು’ ಹಾಗೂ ’ಮಿಥ್ಯ’ ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೋಲು ಗೆಲುವಿನ ಹಾದಿಯಲ್ಲಿ, ಹೊಂಗೆಯ ನೆರಳು, ಕೈ ಹಿಡಿದು ನಡೆಸನ್ನೆನ್ನನು, ಆರದಿರಲಿ ಬೆಳಕು, ವಾರಸುದಾರ, ಅದೇ ಏಕಾಂತ, ಜೊತೆ-ಜೊತೆಯಲಿ ಮುಂತಾದವು ಇವರ ಇನ್ನಿತರ ಕಥಾ ಸಂಕಲನ ಹಾಗೂ ಕಾದಂಬರಿಗಳು. ಆಂಗ್ಲ ಮಾಧ್ಯಮದಲ್ಲಿ ಓದಿರುವ ಗೀತಾ ಅವರು ...
READ MORE