ದಿವ್ಯಾ ಶ್ರೀಧರ ರಾವ್ ಅವರ ಕಿರು ಕಾದಂಬರಿ ‘ಮಿಂಚದ ಮಿಂಚು’. ಚಿಂತಕ ಡಾ.ಜಗದೀಶ್ ಶೆಟ್ಟಿ ಅವರು ಈ ಕೃತಿಗೆ ಮುನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಪ್ರಸ್ತುತ ಈ ಕಾದಂಬರಿಯ ಕುರಿತಂತೆ ಹೇಳುವುದಿದ್ದರೆ, ದಿವ್ಯಾರವರು "ಮಿಂಚದ ಮಿಂಚು" ಎಂಬ ಈ ಕಾದಂಬರಿಯ ಮುಖೇನ ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುರಾಣಪ್ರಿಯರಾದವರಿಗೆ "ಗಾಂಧಾರಿ "ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ "ಮಿಂಚದ ಮಿಂಚು " ಮೂಡಿ ಬಂದಿದೆ. ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ.ಪಾಂಡವ ಪಂಚಕರಿಂದ ಕೌರವಾದಿಗಳ ಹನನದ ಪಶ್ಚಾತ್ ಕಂಪನವೇ "ಗಾಂಧಾರಿ ಶಾಪ" ಎಂಬ ಪ್ರಸಂಗ. ಕೃಷ್ಣಾವಾತಾರದ ಪರಿಸಮಾಪ್ತಿಗೆ ಗಾಂಧಾರಿಯ ಶಾಪವೇ ಹೇತುವಾಯಿತು ಎಂಬ ಮಾತಿದೆ. ಈ ಕಥೆಯ ಎಳೆಯನ್ನೇ ತಿರುಳಾಗಿಸಿಕೊಂಡು ರೂಪುಗೊಂಡದ್ದು "ಮಿಂಚದ ಮಿಂಚು" ಎಂಬ ಮಿನಿ ಕಾದಂಬರಿ ಎಂಬುದಾಗಿ ಅವರು ಬರೆದಿದ್ದಾರೆ ಎಂಬುದಾಗಿ ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ.
ಯಕ್ಷಗಾನ ಪ್ರಸಂಗಕರ್ತೆ, ಲೇಖಕಿ ದಿವ್ಯಾ ಶ್ರೀಧರ ರಾವ್ ಅವರು ಮೂಲತಃ ಕುಂದಾಪುರದವರು. 1986 ಜೂನ್ 21 ರಂದು ತೀರ್ಥಹಳ್ಳಿಯಲ್ಲಿ ಹುಟ್ಟಿದ್ದು. ತದನಂತರ ವಿದ್ಯಭ್ಯಾಸ ಕುಂದಾಪುರದಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದು. ಹೈಸ್ಕೂಲಿಗೆ ಮಂಗಳೂರಿನ ಮೂಲ್ಕಿಯ ಮೊರಾರ್ಜಿ ವಸತಿ ಶಾಲೆ ಸೇರಿ ಮತ್ತೆ ಕಾಲೇಜಿಗೆ ಬೆಂಗಳೂರಿನ ವಾಸವಿ ಕಾಲೇಜಿಗೆ ಸೇರಿ ಬಿಬಿಎಂ ಪದವಿಯನ್ನು 2007 ರಲ್ಲಿ ಮುಗಿಸಿದರು. ಕಾಲೇಜು ದಿನಗಳಲ್ಲಿ ಭಾಷಣ ಹಾಗೂ ಪ್ರಭಂಧಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿದ್ದರೂ ಬರವಣಿಗೆ ಕಡೆ ಹೆಚ್ಚಿನ ಗಮನವಿರಲಿಲ್ಲ. ತಂದೆಯ ಹೆಸರು ಶ್ರೀಧರ್ ರಾವ್ ಹಾಗೂ ತಾಯಿ ಪದ್ಮಾವತಿ ಎಸ್ ರಾವ್. ಗಂಡನ ಹೆಸರು ಅಶ್ವಿನ್ ...
READ MORE