‘ಹಿಮಗಿರಿಯ ಹೇಮಲತೆ’ ಕೃತಿಯು ಸವಿತಾ ಶ್ರೀನಿವಾಸ್ ಅವರ ಕಾದಂಬರಿಯಾಗಿದೆ. ಈ ಕೃತಿಯು 1994 ರಲ್ಲಿ ಮೊದಲನೇ ಬಾರಿಗೆ ಮುದ್ರಣಗೊಂಡಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ: ಇಲ್ಲಿನ ಕಥಾನಕಗಳನ್ನು ಮನೋವೈಜ್ಞಾನಿಕ ಕೋನದಿಂದ ಹೆಣೆಯಲಾಗಿದ್ದು ರಂಗಭೂಮಿಯ ಹಿನ್ನೆಲೆಯಲ್ಲಿ ಕಥಾ ಹಂದರದ ಜಾಡು ಸಾಗುತ್ತದೆ. ಚಿಕ್ಕಂದಿನಲ್ಲಿ ಆದ ಘಟನೆಯೊಂದು ಬಾಲಕಿಯ ಮನದಾಳದಲ್ಲಿ ಮರೆಯಲಾಗದ ಒಂದು ಕಪ್ಪು ಚುಕ್ಕೆಯಾಗಿ ಉಳಿಯುವುದರೊಂದಿಗೆ ಮನೆಯಲ್ಲಿನ ಹದಗೆಟ್ಟ ಪರಿಸ್ಥಿತಿಯಲ್ಲಿ ಈ ಕರಾಳ ನೆನಪುಗಳು ಅವಳನ್ನು ಕಾಡಿ ಆಕೆಯ ವೈವಾಹಿಕ ಸಂಬಂಧಕ್ಕೆ ಹುಳಿ ಹಿಂಡುತ್ತವೆ. ಈ ಧೃತಿಗೆಡುವ ಬೇಸರದ ಸನ್ನಿವೇಶದಿಂದ ಅವಳು ಹೇಗೆ ಹೊರಬರುತ್ತಾಳೆಂಬುದು ಈ ಕಾದಂಬರಿಯ ಮುಖ್ಯ ತಿರುಳು.
ಸವಿತಾ ಶ್ರೀನಿವಾಸ ಅವರು ಮೂಲತಃ ಬೆಂಗಳೂರಿನವರು. ಸ್ನಾತಕೋತ್ತರ ಡಿಪ್ಲೊಮಾ (ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ) ಎಂ.ಎ.(ಯೋಗ) ಪದವಿ ಪಡೆದಿದ್ದಾರೆ. ತಂದೆ ಎಂ.ಸಿ. ಶ್ರೀನಿವಾಸ, ತಾಯಿ ರತ್ನಮ್ಮ. ಕೃತಿಗಳು : ಮಧುಮಾಸ (ಕಾದಂಬರಿ) ೧೯೯೩, ಈ ಮನದ ಆಕಾಶಗಂಗೆ (ಕಥಾ ಸಂಕಲನ) ೧೯೯೩, ಹಿಮಗಿರಿಯ ಹೇಮಲತೆ (ಕಾದಂಬರಿ) ೧೯೯೪, ರ‍್ಮನಿಯ ಒಡಲಲ್ಲಿ (ಪ್ರವಾಸ ಕಥನ) ೧೯೯೮, ಕನ್ನಡ ವೈಜ್ಞಾನಿಕ ಕತೆಗಳು (ಸಂಪಾದಿತ) ೨೦೦೦, ಶತಮಾನದಂಚಿನ ಮಿಂಚು (ಕಥಾ ಸಂಕಲನ) ೨೦೦೧, ಹೂಗುಚ್ಛ (ಪ್ರೌಢಮಕ್ಕಳ ಕತೆಗಳು) ೨೦೦೧, ಸಂಗೀತ ಚಿಕಿತ್ಸೆ (ವೈಜ್ಞಾನಿಕ) ೨೦೦೨, ಕಾಮನಬಿಲ್ಲ ಅರಸುವವರು (ದಶಕದ ಆಯ್ದಕತೆಗಳು) ೨೦೦೫, ...
READ MORE