‘ಸೊನ್ನೆಯಿಂದ ಸೊನ್ನೆಗೆ’ ನಾಗೇಗೌಡ ಎಚ್.ಎಲ್ ಅವರ ಕಾದಂಬರಿ. ಜಾನಪದ ತಜ್ಞ, ಸಾಹಿತಿ, ಅತ್ಯಂತ ಸೂಕ್ಷ್ಮ ಕತಾಹಂದರವನ್ನು ಹೊಂದಿದೆ. ಜನಪದ ಕತೆಯೊಂದರ ಎಳೆ ಹಿಡಿದುಕೊಂಡು ಹುಟ್ಟಿದ್ದ ಈ ಕಾದಂಬರಿ ಮೈಲಾರದ ಮೂಲಪುರುಷರ ಚರಿತ್ರೆಯನ್ನು ಒಳಗೊಂಡಿದೆ. ಊರ ದೇವರ ಒಕ್ಕಲಾಗದೇ, ಊರವನಾಗದೆ ಉಳಿದ ಚನ್ನಯ್ಯನ ದುರಾಸೆಯ ಅನರ್ಥವನ್ನು ಬಣ್ಣಿಸುವ ವಿಶಿಷ್ಯ ಕತೆಯನ್ನು ಹೇಳುತ್ತದೆ. ತಾವು ಕಂಡುಂಡ ಗ್ರಾಮೀಣ ಬದುಕನ್ನು ರಸವತ್ತಾಗಿ ವರ್ಣಿಸುವಲ್ಲಿ ನಾಗೇಗೌಡರು ಎತ್ತಿದ ಕೈ. ಅದರಂತೆಯೇ ಈ ಕತೆಯೂ ಅವರ ವಿಭಿನ್ನ ಶೈಲಿಗೆ ಕನ್ನಡಿ ಹಿಡಿದಂತಿದೆ.
ಜಾನಪದ ತಜ್ಞ, ಸಾಹಿತಿ, ದಕ್ಷ ಆಡಳಿತಗಾರರೆನಿಸಿದ್ದ ನಾಗೇಗೌಡರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಹೆರಗನ ಹಳ್ಳಿಯ ‘ದೊಡ್ಡಮನೆ’ ಕುಟುಂಬದಲ್ಲಿ. ತಂದೆ ಲಿಂಗೇಗೌಡ, ತಾಯಿ ಹುಚ್ಚಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಳೀಸಂದ್ರ ಹಾಗೂ ನಾಗತಿಹಳ್ಳಿಯಲ್ಲಿ ಮುಗಿಸಿದ ಅವರು ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣವನ್ನು ಚನ್ನರಾಯಪಟ್ಟಣದಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನಲ್ಲಿ ಇಂಟರ್ ಮೀಡಿಯೆಟ್, ಮೈಸೂರಿನಲ್ಲಿ ಬಿ.ಎಸ್ಸಿ, ಮತ್ತು ಪೂನದಲ್ಲಿ ಎಲ್.ಎಲ್.ಬಿ ಪದವಿ ಪಡೆದರು. ಮುನ್ಸೀಫ್ ಕೋರ್ಟಿನಲ್ಲಿ ಹೆಡ್ ಮುನ್ಷಿಯಾಗಿ ವೃತ್ತಿ ಆರಂಭಿಸಿದ್ದು ನರಸಿಂಹರಾಜಪುರದಲ್ಲಿ. ಆನಂತರ ಮೈಸೂರು ಸಿವಿಲ್ ಸರ್ವೀಸ್‌ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರೆವಿನ್ಯೂ ಇಲಾಖೆಯಲ್ಲಿ ಪ್ರೊಬೆಷನರಿ ಅಧಿಕಾರಿಯಾಗಿ ಆಯ್ಕೆಯಾದರು. ಅಲ್ಲದೆ ...
READ MORE