ಲೇಖಕ ಪ್ರಭಾಕರ್ ನೀರ್‌ಮಾರ್ಗ ಅವರ 28 ನೇ ಕೃತಿ ‘ತುಳು ಬದುಕು’. ತುಳುನಾಡಿನ ಪರಿಸರದ, ನೆಲದ ಸಂಸ್ಕೃತಿಯನ್ನು ಬಹುವಿನ್ಯಾಸಗಳಲ್ಲಿ ಇಲ್ಲಿ ಪ್ರಕಟಿಸುವ ಪ್ರಯತ್ನವಾಗಿದೆ. ಕೃತಿಯ ಬಗ್ಗೆ ಲೇಖಕರು ಹೇಳುವಂತೆ, ಇಲ್ಲಿ ಸಮಾಜದ ಮೇಲ್ದರ್ಜೆಯಿಂದ ಹಿಡಿದು ತಳಸಮುದಾಯದ ತನಕ ಇದರಲ್ಲಿನ ಪಾತ್ರಗಳು ಪ್ರತಿಕ್ರಿಯಿಸುತ್ತದೆ. ಇಲ್ಲಿನ ವಿಭಿನ್ನ ಸಮುದಾಯಗಳು ಸಾಮಾಜಿಕ ವಾಸ್ತವಕ್ಕೆ ಬೇರೆ ಬೇರೆ ನೆಲೆಗಳಲ್ಲಿ ಸ್ಪಂದಿಸುವುದನ್ನೂ ಇಲ್ಲಿ ಗಮನಿಸಬಹುದಾಗಿದೆ. ಒಟ್ಟಿನಲ್ಲಿ ಪ್ರಾದೇಶಿಕತೆಗೆ ತುಂಬು ಜೀವಂತಿಕೆ ನೀಡುವ ಪ್ರಯತ್ನ ಮಾಡಿರುತ್ತೇನೆ. ದೇಶಿಯತೆಯ ಸೊಬಗಿನಿಂದಾಗಿ ನನ್ನ ಬರವಣಿಗೆ ಓದುಗರಿಗೆ ಮೆರುಗು ನೀಡಬಹುದು ಎಂಬುದಂತೂ ಸತ್ಯ. ಸ್ಥಳೀಯ ಹಾಗೂ ಜಾನಪದೀಯ ಅಂಶಗಳು ಈ ಕಾದಂಬರಿಯಲ್ಲಿ ವಿಶಿಷ್ಟವಾಗಿ ಅಭಿವ್ಯಕ್ತಿಗೊಂಡಿದೆ ಎಂದು ಹೇಳಲು ಹೆಮ್ಮೆಯಾಗುತ್ತಿದೆ.
ಕರಾವಳಿಯ ಸೃಜನಶೀಲ ಬರಹಗಾರ ಡಾ. ಪ್ರಭಾಕರ್ ನೀರ್‌ಮಾರ್ಗ ಅವರು ಕನ್ನಡದ ಕಾದಂಬರಿಕಾರ. ಜೊತೆಗೆ, ನೂರಾರು ಕತೆ, ಕವನ, ನಾಟಕಗಳನ್ನೂ ಬರೆದಿದ್ದಾರೆ. ಇವರು ತುಳು ಜಾನಪದ ಲೋಕವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನಾವರಣ ಮಾಡಿದವರು. ಹಾಗಾಗಿ ತುಳುನಾಡಿನ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಆರಾಧನಾ ಆಯಾಮಗಳು ಇವರ ಬರವಣಿಗೆಗಳಲ್ಲಿ ಕಾಣಸಿಗುತ್ತವೆ. ಇವರು ಕನ್ನಡ ಸಾಹಿತ್ಯ ಲೋಕಕ್ಕೆ 27 ಕೃತಿಗಳನ್ನು ನೀಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ, ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು: ಧರ್ಮಚಾವಡಿ, ಕಾಲಚಕ್ರ, ಕಣ್ಮಣಿ, ದಾಯಿತ್ವ, ಕಾರ್ಣಿಕ, ಮದಿಪು, ವೇಷ, ...
READ MORE