ತಮಸೋಮಾ ಜ್ಯೋತಿರ್ಗಮಯ ಆರತಿ ವೆಂಕಟೇಶ ಅವರ ಕಾದಂಬರಿಯಾಗಿದೆ. ಮಕ್ಕಳ ವ್ಯಕ್ತಿ ವಿಕಾಸಕ್ಕೆ ಹಿರಿಯರ ಮಾರ್ಗದರ್ಶನ ಬಹಳ ಮುಖ್ಯ. ಅವರಿಗೆ ಪ್ರೀತಿ, ಮಮತೆಯ ಸಿಂಚನ ಮಾಡದೆ ಅವರಲ್ಲಿ ದೊಡ್ಡಸ್ತಿಕೆ, ಡಂಭಾಚಾರವನ್ನು ಪ್ರೋತ್ಸಾಹಿಸಿ ಹಿರಿಯರಾಗಿ ತಾವೇ ಅಡ್ಡದಾರಿ ಗೆಳೆದರೆ ಅದರ ಪರಿಣಾಮವನ್ನು ತಾವೇ ಎದುರಿಸಬೇಕಾಗುತ್ತದೆ ಎಂಬ ಕಠೋರ ಸತ್ಯವನ್ನು ತಂದೆ ತಾಯಿ ಖಂಡಿತ ಮರೆಯಬಾರದು! ಬೆಳೆದು ನಿಂತ ಮರವನ್ನು ಬಾಗಿಸಲು ಪ್ರಯತ್ನಿಸಿದರೆ ಅದು ಮುರಿದು ನಮ್ಮ ಮೇಲೆ ಬೀಳುವುದು ಖಂಡಿತ! ಇಂಥ ಒಂದು ನಿದರ್ಶನವನ್ನು ನೈಜ ಘಟನೆಗಳೊಂದಿಗೆ ಹೆಣೆದು ಈ ಕಾದಂಬರಿಯಲ್ಲಿ ರೂಪಿಸಲಾಗಿದೆ.
ಕಾದಂಬರಿಗಾರ್ತಿ ಆರತಿ ವೆಂಕಟೇಶ್ ಅವರು 1964 ಫೆಬ್ರವರಿ 15ರಂದು ಜನಿಸಿದರು. ತಂದೆ ನವರತ್ನರಾಮ್, ತಾಯಿ ಉಷಾ ನವರತ್ನರಾಮ್. ’ಆಶಾಕಿರಣ, ಅಮೃತಬಿಂದು, ನಿನಗಾಗಿ ನಾನೋಡಿ ಬಂದೆ, ಜೀವನ ಸಂಧ್ಯಾ, ಅಗೋಚರ, ಮುಕುಕಿದೀ ಮಬ್ಬಿನಲಿ, ಮಾಫಲೇಶುಕದಾಚನ, ಯಾವ ಮುರಳಿ ಕರೆಯಿತು, ತಲ್ಲಣಿಸದಿರು ಮನವೆ, ಧರಿತ್ರಿ’ ಮುಂತಾದ 30ಕ್ಕೂ ಹೆಚ್ಚು ಕಾದಂಬರಿ ರಚಿಸಿದ್ದಾರೆ. ...
READ MORE