ಟು-ಲೆಟ್

Author : ಎಂ.ಕೆ. ಇಂದಿರಾ

Pages 198

₹ 117.00




Year of Publication: 2014
Published by: ಸೌಮ್ಯ ಎಂ.
Address: #10, ಫ್ಲ್ಯಾಟ್ ಸಂಖ್ಯೆ: 203, 4ನೇ ಅಡ್ಡರಸ್ತೆ, 1ನೇ ಮುಖ್ಯರಸ್ತೆ, ಬಾಲಾಜಿನಗರ, ಬೆಂಗಳೂರು-560029

Synopsys

ಖ್ಯಾತ ಕಾದಂಬರಿಕಾರ್ತಿ ಎಂ.ಕೆ.ಇಂದಿರಾ ಅವರ ಕಾದಂಬರಿ-ಟು-ಲೆಟ್. ಮಲೆನಾಡಿನ ಒಂದು ಕುಟುಂಬ ಬೆಂಗಳೂರಿಗೆ ಬಂದು ಬಾಡಿಗೆ ಮನೆ ಪಡೆಯಲು ಮತ್ವತು ತದನಂತರ ಅದು ಪಡುವ ಪಾಡನ್ನು ತುಂಬಾ ಸ್ವಾರಸ್ಯಕರವಾಗಿ ಚಿತ್ರಿಸಿದ ಕಾದಂಬರಿ ಇದು. ಮಲೆನಾಡಿನ ಪರಿಸರದಲ್ಲಿ ತಮ್ಮದೇ ಸ್ವಂತ ದೊಡ್ಡ ಮನೆಯಲ್ಲಿದ್ದು ಅಭ್ಯಾಸವಿರುವ ಈ ಕುಟುಂಬ ಈಗ ವಠಾರದಲ್ಲಿಯ ಒಂದು ಸಣ್ಣ ಮನೆ, ನಾಲ್ಕಾರು ಮನೆಗಳ ಮಧ್ಯೆ ಒಂದೇ ಒಂದು ಸಣ್ಣ ಶೌಚಾಲಯ, ನೀರು ಬಂದಾಗಲಷ್ಟೇ ಶೇಖರಿಸಿಕೊಳ್ಳುವುದು ಇತ್ಯಾದಿ ಕಷ್ಟಗಳ ಮಧ್ಯೆ ಈ ಕುಟುಂಬ ನೆಮ್ಮದಿಯ ಜೀವನ ಸಾಗಿಸುವುದೆಂತು? ಬಾಡಿಗೆದಾರರು ಪಡುವ ಕಷ್ಟಗಳನ್ನು ಚಿತ್ರಿಸಿರುವ ಈ ಕಥಾ ವಸ್ತು ಮನರಂಜನೆಯಾಗಿಯೂ ಇದೆ. ಆದರೆ, ನಗರಗಳಲ್ಲಿ ಅಸಹನೀಯವಾಗುತ್ತಿರುವ ಕೌಟುಂಬಿಕ ಬದುಕಿನ ಆಯಾಮವನ್ನೂ ಸಹ ತೆರೆದು ತೋರುತ್ತದೆ. ಭಾಷೆ ಸರಳವಾಗಿದ್ದು, ಲೇಖಕಿ ತಮ್ಮ ಅನುಭವವೇ ಬರೆದಿದ್ದಾರೆ ಎಂಬಷ್ಟು ಹೃದಯಂಗಮವಾಗಿದೆ.

About the Author

ಎಂ.ಕೆ. ಇಂದಿರಾ
(05 January 1917 - 15 March 1994)

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ದ ಕಾದಂಬರಿಗಾರ್ತಿಯರಲ್ಲಿ ಒಬ್ಬರಾದ ಎಂ.ಕೆ.ಇಂದಿರ ಹುಟ್ಟಿದ್ದು 05-01-1917 ರಂದು. ಊರು ಮಲೆನಾಡಿನ ತೀರ್ಥಹಳ್ಳಿ. ತಂದೆ ತರೀಕೆರೆ ಸೂರ್ಯನಾರಾಯಣ, ತಾಯಿ ಬನಶಂಕರಮ್ಮ. ಇಂದಿರಾ ಓದಿದ್ದು, ಕನ್ನಡ ಮಾಧ್ಯಮಿಕ ಶಾಲೆಯ  2ನೇಯ ತರಗತಿವರೆಗೆ ಮಾತ್ರ. ತಮ್ಮ 12 ವರ್ಷಕ್ಕೆ ಮದುವೆಯಾಯಿತು. ಅವರು ಬರೆಯಲು ಆರಂಭಿಸಿದ್ದು 1963ರಲ್ಲಿ. ತುಂಗಭದ್ರ ಅವರ ಮೊದಲ ಕೃತಿ. ಮಲೆನಾಡಿನ ಸಹ್ಯಾದ್ರಿಶ್ರೇಣಿ, ಭೀಮವೃಕ್ಷರಾಜಿ, ಹಕ್ಕಿಗಳ ಇಂಚರ, ಹಸಿರು.ಇವೆಲ್ಲವೂ ಇಂದಿರ ಅವರ ಕಾದಂಬರಿಗಳಲ್ಲಿ ರಾರಾಜಿಸಿರುತ್ತವೆ. ಅವರ ಮೊಟ್ಟಮೊದಲ ಕಾದಂಬರಿ "ತುಂಗಭದ್ರ"."ತುಂಗಭದ್ರೆ"ಯನ್ನು ಮೆಚ್ಚಿಕೊಂಡು ಕೀರ್ತಿನಾಥ ಕುರ್ತಕೋಟಿಯವರು ಒಂದು ಧೀರ್ಘವಾದ ಮುನ್ನುಡಿ ಬರೆದರು.ಈ ಕಾದಂಬರಿ ವಿಶ್ವವಿದ್ಯಾನಿಲಯದ ಪದವಿ ...

READ MORE

Related Books