ಸದಾ ಮಾತು ಬಡಬಡಿಸುವ ವೃದ್ಧೆ -ಮಮ್ತಾಜ್. ರೈಲ್ವೆ ಸ್ಟೇಷನ್ ನಲ್ಲಿ ಸಿಕ್ಕ ಮಗು -ನೂರಿ. ಅದರೊಂದಿಗೆ ಕೊಳಗೇರಿಯಲ್ಲಿ ವಾಸಿಸುತ್ತಿದ್ದ ಮಮ್ತಾಜ್, ಸುತ್ತಮತ್ತಲಿನ ಜನರೊಂದಿಗೆ ಅಷ್ಟು ಸುಲಭವಾಗಿ ಬೆರೆಯುವಂತವಳಲ್ಲ. ಆದರೂ, ನೂರಿಗೆ ಮಾತ್ರ ಎಲ್ಲರೂ ಪ್ರೀತಿಸುವವರೆ. ಸೋನಿ ಸಹ ಅವಳ ಗೆಳತಿ. ಇಬ್ಬರನ್ನು ಜನರು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನೂರಿ ಮತ್ತು ಸೋನಿಯ ಮಾನಸಿಕ ತಲ್ಲಣಗಳು, ಪರಸ್ಪರರ ಮನೋಬೆಂಬಲದಿಂದ ಅವರು ಸನ್ನಿವೇಶಗಳನ್ನು ಎದುರಿಸುವ ಪರಿ ಈ ಕಾದಂಬರಿಯ ವಸ್ತು. ಈ ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ‘ಕಾಕೋಳು ಸರೋಜಮ್ಮ ದತ್ತಿನಿಧಿ ಪ್ರಶಸ್ತಿ’ (2009) ಲಭಿಸಿದೆ.
ಜಾನಕಿ ಸುಂದರೇಶ ಅವರು ಲೇಖಕಿ. ಕೃತಿಗಳು-ಕೋಣಾಯಣ, ನೀವು ಚೆನ್ನಾಗಿ ಆಲೋಚಿಸಬಲ್ಲಿರಾ ?, ನೂರಿ, ಕೌಟುಂಬಿಕ ಸಾಮರಸ್ಯ ಸಾಧಿಸಿ ಇತ್ಯಾದಿ ...
READ MORE